ಮಡಿಕೇರಿ, ಸೆ. ೨೧: ಇಂದಿಗೂ ಕೊಡಗಿಗೆ ಸಂಬAಧಿಸಿದAತೆ ಮೂಲ ಆಕರ ಗ್ರಂಥವಾಗಿರುವ ಕೊಡಗಿನ ಇತಿಹಾಸ ಕೃತಿಯ ಸಾಹಿತಿ ದಿ. ಡಿ.ಎನ್. ಕೃಷ್ಣಯ್ಯ ಹೆಸರಿನಲ್ಲಿ ಅವರ ಪುತ್ರಿ ಜಿ.ಎಸ್. ಇಂದಿರಾ ಕೊಡಗು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ. ನಾಡಿನ ಖ್ಯಾತ ಇತಿಹಾಸಕಾರರಾಗಿದ್ದ ಡಿ.ಎನ್. ಕೃಷ್ಣಯ್ಯ ಅವರ ಹೆಸರು ಚಿರಸ್ಥಾಯಿಯಾಗಬೇಕೆಂಬ ಉದ್ದೇಶದಿಂದ ಈ ದತ್ತಿ ನೀಡಿರುವುದಾಗಿ ಇಂದಿರಾ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಪತ್ರಕರ್ತರು ಯಾವುದೇ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಕನ್ನಡ ಸಾಹಿತ್ಯ ಸಂಬAಧಿತ ಲೇಖನಕ್ಕೆ ಪ್ರತಿ ವರ್ಷ ಅತ್ಯುತ್ತಮ ಲೇಖನಕ್ಕಾಗಿನ ಪ್ರಶಸ್ತಿಯನ್ನು ದತ್ತಿನಿಧಿಯಿಂದ ನೀಡಬೇಕೆಂಬ ಉದ್ದೇಶ ತನ್ನದಾಗಿದೆ ಎಂದು ಕುಂಬೂರು ನಿವಾಸಿಯಾಗಿರುವ ಇಂದಿರಾ ಸತ್ಯನಾರಾಯಣ ತಿಳಿಸಿದ್ದಾರೆ.

ಮುಂದಿನ ವರ್ಷದಿಂದ ಈ ಪ್ರಶಸ್ತಿಗೆ ಜಿಲ್ಲೆಯ ಪತ್ರಕರ್ತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾರೈ ಮತ್ತು ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.