ಮಡಿಕೇರಿ, ಸೆ. ೨೧: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ೨೦೨೦-೨೧ನೇ ಸಾಲಿನ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಇ.ಬಿ. ದಿನೇಶ್ ನಾಯರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್. ನಾಗರಾಜ್ ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಪಿ.ಹೆಚ್. ಅಭಿಜಿತ್, ಕಾರ್ಯಾಧ್ಯಕ್ಷರಾಗಿ ಎಂ.ಪಿ. ರವಿ, ಉಪಾಧ್ಯಕ್ಷರಾಗಿ ನವೀನ್ ಅಂಬೆಕಲ್, ಚೇತನ್ (ದಿನು), ಸಹ ಕಾರ್ಯದರ್ಶಿಗಳಾಗಿ ಹೆಚ್.ಆರ್. ಧರ್ಮರಾಜ್, ಗೌರವಾಧ್ಯಕ್ಷರಾಗಿ ಸಿ.ಎಸ್. ರಂಜಿತ್, ಕೆ.ಕೆ. ಮೋಹನ್, ಗೌರವ ಸಲಹೆಗಾರರಾಗಿ ದೇವಾಲಯದ ಟ್ರಸ್ಟಿಗಳು ಹಾಗೂ ಉತ್ಸವ ಸಮಿತಿಯ ಮಾಜಿ ಅಧ್ಯಕ್ಷರುಗಳು ಕಾರ್ಯ ನಿರ್ವಹಿಸಲಿದ್ದಾರೆ.

ದೇವಾಲಯ ಅಲಂಕಾರ ಮತ್ತು ಕರಗ ಸಮಿತಿಗೆ ದೇವಾಲಯ ಸಮಿತಿ, ದಸರಾ ಸಮಿತಿ, ಮಂಟಪ ಅಲಂಕಾರ ಸಮಿತಿಗೆ ಆನಂದ್, ಪ್ರಜ್ವಲ್, ಪವನ್ ಹಾಗೂ ತಂಡ, ಚಲನವಲನ ಸಮಿತಿಗೆ ಅಧ್ಯಕ್ಷರು ಹಾಗೂ ಕಾರ್ಯಾಕಾರಿ ಸಮಿತಿಯ ೧೨೦ ಸದಸ್ಯರನ್ನು ಆಯ್ಕೆ ಮಾಡಲಾಯಿತು.