ಮಡಿಕೇರಿ, ಸೆ. ೨೨: ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗದ ವತಿಯಿಂದ ಬಾಳೆಲೆ ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ಜೆ. ಸೋಮಣ್ಣ ಅವರ ನಾಲ್ಕು ಕೃತಿಗಳನ್ನು ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮೌನ ಕಣಿವೆಯ ಸಂತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಜಾತಿ ತಾರತಮ್ಯ, ಮೂಢನಂಬಿಕೆಯ ವಿರುದ್ಧ ಹೋರಾಡಿದ ನಾರಾಯಣ ಗುರುಗಳ ಬಗ್ಗೆ ಪುಸ್ತಕ ರಚಿಸಿ ಅವರ ಜೀವನವನ್ನು ಸೋಮಣ್ಣ ಅವರು ಪರಿಚಯಿಸುವ ಕೆಲಸ ಮಾಡಿದ್ದಾರೆ. ನಾರಾಯಣ ಗುರುಗಳ ತತ್ವ, ಸಿದ್ಧಾಂತ ಇಂದಿನ ಯುವಜನಾಂಗ ಮೈಗೂಡಿಸಿಕೊಳ್ಳಬೇಕು. ಅವರ ಸಿದ್ಧಾಂತ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಜೀವಿತ ಕಾಲದಲ್ಲಿ ನಾರಾಯಣ ಗುರು ದಂತಕತೆಯಾದವರು. ಶೋಷಿತ ಸಮಾಜದ ಸುಧಾರಣೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿ. ಮೂಢನಂಬಿಕೆ, ಕಂದಾಚಾರ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿ ಶೋಷಿತರ ಬೆಂಗಾವಲಾಗಿ ನಿಂತರು ಎಂದ ಅವರು, ಪುಸ್ತಕಗಳನ್ನು ಓದುಗರು ಖರೀದಿಸಿ ಓದಬೇಕು. ಇದರಿಂದ ಲೇಖಕರಿಗೆ ಮುಂದೆ ಪುಸ್ತಕ ರಚಿಸುವ ಉತ್ಸಾಹ ಬರುತ್ತದೆ ಎಂದರು.
ಕನ್ನಡ ಸಾಹಿತ್ಯಕ್ಕೆ ಕೊಡಗಿನ ಕೊಡುಗೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ವಕೀಲ ಕೆ.ಆರ್. ವಿದ್ಯಾಧರ್, ಕೊಡಗು ಮೂಲದ ಸಾಹಿತಿಗಳಲ್ಲದೆ ವಿವಿಧ ಕಾರಣಕ್ಕೆ ಕೊಡಗಿಗೆ ಬಂದವರು ಹಾಗೂ ಪ್ರಪಂಚದ ಬೇರೆ ಕಡೆಗಳಲ್ಲಿ ನೆಲೆಸಿರುವ ಕೊಡಗಿನ ಸಾಹಿತಿಗಳು ಸೇರಿದಂತೆ ಪತ್ರಕರ್ತರು, ಪತ್ರಿಕಾ ವಿತರಕರ ಪರಿಚಯ ಪುಸ್ತಕದ ಮೂಲಕ ನಿರೂಪಣೆ ಮಾಡಲಾಗಿದೆ. ಮಡಿಕೇರಿ, ಸೆ. ೨೨: ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗದ ವತಿಯಿಂದ ಬಾಳೆಲೆ ವಿಜಯಲಕ್ಷಿö್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ಜೆ. ಸೋಮಣ್ಣ ಅವರ ನಾಲ್ಕು ಕೃತಿಗಳನ್ನು ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮೌನ ಕಣಿವೆಯ ಸಂತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಜಾತಿ ತಾರತಮ್ಯ, ಮೂಢನಂಬಿಕೆಯ ವಿರುದ್ಧ ಹೋರಾಡಿದ ನಾರಾಯಣ ಗುರುಗಳ ಬಗ್ಗೆ ಪುಸ್ತಕ ರಚಿಸಿ ಅವರ ಜೀವನವನ್ನು ಸೋಮಣ್ಣ ಅವರು ಪರಿಚಯಿಸುವ ಕೆಲಸ ಮಾಡಿದ್ದಾರೆ. ನಾರಾಯಣ ಗುರುಗಳ ತತ್ವ, ಸಿದ್ಧಾಂತ ಇಂದಿನ ಯುವಜನಾಂಗ ಮೈಗೂಡಿಸಿಕೊಳ್ಳಬೇಕು. ಅವರ ಸಿದ್ಧಾಂತ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಜೀವಿತ ಕಾಲದಲ್ಲಿ ನಾರಾಯಣ ಗುರು ದಂತಕತೆಯಾದವರು. ಶೋಷಿತ ಸಮಾಜದ ಸುಧಾರಣೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿ. ಮೂಢನಂಬಿಕೆ, ಕಂದಾಚಾರ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿ ಶೋಷಿತರ ಬೆಂಗಾವಲಾಗಿ ನಿಂತರು ಎಂದ ಅವರು, ಪುಸ್ತಕಗಳನ್ನು ಓದುಗರು ಖರೀದಿಸಿ ಓದಬೇಕು. ಇದರಿಂದ ಲೇಖಕರಿಗೆ ಮುಂದೆ ಪುಸ್ತಕ ರಚಿಸುವ ಉತ್ಸಾಹ ಬರುತ್ತದೆ ಎಂದರು.
ಕನ್ನಡ ಸಾಹಿತ್ಯಕ್ಕೆ ಕೊಡಗಿನ ಕೊಡುಗೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ವಕೀಲ ಕೆ.ಆರ್. ವಿದ್ಯಾಧರ್, ಕೊಡಗು ಮೂಲದ ಸಾಹಿತಿಗಳಲ್ಲದೆ ವಿವಿಧ ಕಾರಣಕ್ಕೆ ಕೊಡಗಿಗೆ ಬಂದವರು ಹಾಗೂ ಪ್ರಪಂಚದ ಬೇರೆ ಕಡೆಗಳಲ್ಲಿ ನೆಲೆಸಿರುವ ಕೊಡಗಿನ ಸಾಹಿತಿಗಳು ಸೇರಿದಂತೆ ಪತ್ರಕರ್ತರು, ಪತ್ರಿಕಾ ವಿತರಕರ ಪರಿಚಯ ಪುಸ್ತಕದ ಮೂಲಕ ನಿರೂಪಣೆ ಮಾಡಲಾಗಿದೆ. ಅಪಾರ ಕೊಡುಗೆ ನೀಡಿದ್ದಾರೆ. ಅತ್ಯುತ್ತಮ ಕತೆಗಾರ ಅಶ್ವತ್ಥ ನಾರಾಯಣ ಅವರ ಬಗೆಗಿನ ಪುಸ್ತಕ ಇದಾಗಿದ್ದು, ಪ್ರತಿಯೊಬ್ಬರು ಇದನ್ನು ಓದಬೇಕು ಎಂದರು.
ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್ ಪ್ರಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್, ಲೇಖಕ ಜೆ. ಸೋಮಣ್ಣ ಹಾಜರಿದ್ದರು. ಇದೇ ಸಂದರ್ಭ ಭಾವಗೀತಾ ಗಾಯನ ಕಾರ್ಯಕ್ರಮ ನಡೆಯಿತು.