ಶನಿವಾರಸಂತೆ, ಸೆ. ೨೦: ವಿವಾಹವಾದ ಎರಡೇ ದಿನದಲ್ಲಿ ನವವಿವಾಹಿತ ಯುವಕನೋರ್ವ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದ ಪೊನ್ನಪ್ಪ (ಕೌಶಿಕ್-೩೦) ಮೃತ ಯುವಕ. ಪೊನ್ನಪ್ಪ ಅವರ ವಿವಾಹವು ತಾ. ೧೬ ರಂದು ಯಸಳೂರು ಹೋಬಳಿ ವ್ಯಾಪ್ತಿಯ ಗ್ರಾಮವೊಂದರ ಯುವತಿಯೊಂದಿಗೆ ಶನಿವಾರಸಂತೆಯಲ್ಲಿ ನೆರವೇರಿತ್ತು. ಬಳಿಕ ತಾ. ೧೮ ರಂದು ಪೊನ್ನಪ್ಪ ಹೃದಯಾಘಾತಕ್ಕೆ ಒಳಗಾಗಿ ಹಾಸನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.