ಮಡಿಕೇರಿ, ಸೆ. ೨೦: ೨೦೨೧ ನೇ ಸಾಲಿನ, ಸರಕಾರ ನೀಡಿದ್ದ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ತಿರಸ್ಕರಿಸಿ ಪರೀಕ್ಷೆಗೆ ಹಾಜರಾಗಿದ್ದ ಸಂತ ಮೈಕಲರ ಸಂಯುಕ್ತ ಪ.ಪೂ ಕಾಲೇಜಿನ ದ್ವಿತೀಯ ಪಿ.ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿ.ಎಸ್ ಸಾಕ್ಷಿ ಕಾವೇರಮ್ಮ ೫೬೨ ಅಂಕಗಳನ್ನು ಗಳಿಸಿದ್ದಾರೆ. ಈ ಹಿಂದೆ ದೊರೆತ ಫಲಿತಾಂಶಕ್ಕಿAತ ೭೬ ಅಂಕಗಳು ಹೆಚ್ಚಿಸಿಕೊಂಡಿದ್ದಾರೆ.
ಕೊರೊನಾ ಕಾರಣ ಪರೀಕ್ಷೆಗಳು ರದ್ದಾಗಿದ್ದು, ಎಸ್.ಎಸ್.ಎಲ್.ಸಿ ಹಾಗೂ ಪ್ರಥಮ ಪಿ.ಯು ವಾರ್ಷಿಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಸರಕಾರದ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಿತ್ತು. ಇದರಲ್ಲಿ ಸಾಕ್ಷಿಗೆ ೪೮೬ ಅಂಕಗಳು ದೊರೆತಿದ್ದು, ಇದನ್ನು ತಿರಸ್ಕರಿಸಿ ಪರೀಕ್ಷೆಗೆ ಹಾಜರಾಗಿ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ.