ಮಡಿಕೇರಿ, ಸೆ. ೨೦: ದಿನನಿತ್ಯ ಸಾವಿರಾರು ಪ್ರವಾಸಿಗರು ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.
ಕೊಡಗಿನ ಹೆಮ್ಮೆಯ ಪುತ್ರ ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸ್ಥಾಪನೆಗೊಂಡ ಜಿಲ್ಲೆಯ ಕುಶಾಲನಗರ ತಾಲೂಕಿನ ಕಂಬಿಬಾಣೆಯ ಚಿಕ್ಲಿಹೊಳೆ ಜಲಾಶಯಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ದಿನನಿತ್ಯ
ಭೇಟಿ ನೀಡುತ್ತಿದ್ದಾರೆ. ಆದರೆ ಜಲಾಶಯವನ್ನು ವೀಕ್ಷಿಸಲು ಬರುವ ಪ್ರವಾಸಿಗರು ತಮ್ಮ ಜೀವದೊಂದಿಗೆ ಚೆಲ್ಲಾಟ ಆಡುವ ದೃಶ್ಯ ಕಾಣುವುದು ಸಾಮಾನ್ಯವಾಗಿದೆ.
ನೀರಿನಲ್ಲಿಳಿಯುವ ಪುಂಡಾಟಿಕೆ!
ಚಿಕ್ಲಿಹೊಳೆ ಜಲಾಶಯ ನಿರ್ಮಾಣಗೊಂಡು ಇದುವರೆಗೆ ಏಳು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಚಿಕ್ಲಿಹೊಳೆ ಜಲಾಶಯದಲ್ಲಿ ಅಳವಡಿಸಿರುವ ಸೂಚನಾ ಫಲಕದಲ್ಲಿ ಮಾಹಿತಿ ಇದೆ. ನೀರಿಗಿಳಿಯಬಾರದೆಂದು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚನೆ ನೀಡಿದರು ಸಹಾ ಪ್ರವಾಸಿಗರು ಹಾಗೂ ಸ್ಥಳೀಯರು ಡ್ಯಾಂ ವಾಚ್ ಮ್ಯಾನ್ ಕಣ್ತಪ್ಪಿಸಿ ಕ್ಯಾರೇ ಎನ್ನದೇ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನೀರಿನ ಪ್ರಮಾಣ ಹೆಚ್ಚಿದೆ. ಫೋಟೋ ಕ್ಲಿಕ್ಕಿಸುವ ಹುಚ್ಚಾಟಕ್ಕೆ ಹಲವು ಪ್ರವಾಸಿತಾಣಗಳಲ್ಲಿ ಜೀವ ಕಳೆದುಕೊಂಡವರ ಪಟ್ಟಿ ಬಹುದೊಡ್ಡದಿದೆ. ನೀರಿಗಿಳಿದು ಕೆಲವರು ತಮ್ಮ ಹುಚ್ಚಾಟವನ್ನು ಮೆರೆಯುತ್ತಿದ್ದಾರೆ, ಅಲ್ಲದೇ ನೀರಿನ ಬದಿಯಲ್ಲಿ ಕುಳಿತು ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಕೈ, ಕಾಲು ತೊಳೆಯ ಲೆಂದು ನೀರಿಗಿಳಿದು ಪ್ರಾಣಕಳೆದು ಕೊಂಡವರು ಕೂಡ ಇದ್ದಾರೆ.
ಬೇಲಿ - ಗೇಟ್ ಹಾರಿ ಬರುವ ಸ್ಥಳೀಯರು ಹಾಗೂ ಪ್ರವಾಸಿಗರು
ಜಿಲ್ಲಾಡಳಿತವು ಬೆಳಗ್ಗೆ ೮ ಗಂಟೆಯಿAದ ಸಂಜೆ ೫.೩೦ ಗಂಟೆಯವರೆಗೆ ಪ್ರವಾಸಿಗರಿಗೆ ಚಿಕ್ಲಿಹೊಳೆ ಜಲಾಶಯವನ್ನು ವೀಕ್ಷಿಸಲು ಅವಕಾಶ ನೀಡಿದೆ. ಸಂಜೆ ೫.೩೦ ಗಂಟೆಯ ನಂತರ ಗೇಟ್ ಮುಚ್ಚಲಾಗುತ್ತದೆ. ತದನಂತರ ಪ್ರವಾಸಿಗರಾಗಲಿ ಅಥವಾ ಸ್ಥಳೀಯರಾಗಲಿ ಭೇಟಿ ನೀಡುವಂತಿಲ್ಲ. ಆದರೂ ಸಂಜೆ ಗೇಟ್ ಮುಚ್ಚಲ್ಪಟ್ಟ ನಂತರವೇ ನೀರಿಗಿಳಿದು ಸಾವುಗಳು ಸಂಭವಿಸಿರುವುದು. ಗೇಟ್ ಮುಚ್ಚಲ್ಪಟ್ಟಿದ್ದರೂ ಸಹಾ, ಪ್ರವಾಸಿಗರು ಹಾಗೂ ಸ್ಥಳೀಯರು ಗೇಟ್ ಹಾಗೂ ಬೇಲಿ ಹಾರಿ ಚಿಕ್ಲಿಹೊಳೆ ಜಲಾಶಯಕ್ಕೆ ಭೇಟಿ ನೀಡುತ್ತಿದ್ದಾರೆ. ಸಂಜೆಯ ೫:೩೦ ಗಂಟೆಯ ನಂತರ ಡ್ಯಾಂ ವಾಚ್ ಮ್ಯಾನ್ ಇರುವುದಿಲ್ಲ. ಈ ಸಮಯದಲ್ಲಿ ಪ್ರವಾಸಿಗರು, ಗೇಟ್ ಹಾಗೂ ಬೇಲಿ ಹಾರಿ ನೀರಿಗಿಳಿಯುತ್ತಿದ್ದಾರೆ.
ಒಬ್ಬರೇ ಡ್ಯಾಂ ವಾಚ್ಮ್ಯಾನ್ : ಬೆಳಗ್ಗೆ ೮:೦೦ ಗಂಟೆಯಿAದ ೫:೩೦ ಗಂಟೆಯವರೆಗೆ ಡ್ಯಾಂ ವಾಚ್ ಮ್ಯಾನ್ ಆಗಿ, ಗುತ್ತಿಗೆ ಆಧಾರದಲ್ಲಿ ಕಳೆದ ಹಲವು ವರ್ಷಗಳಿಂದ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೆ ೫.೩೦ರ ನಂತರ ಡ್ಯಾಂ ನಿರ್ವಹಣೆ ಹಾಗೂ ಜಲಾಶಯವನ್ನು ನೋಡಿಕೊಳ್ಳಲು ಯಾರೂ ಕೂಡ ಇರುವುದಿಲ್ಲ. ಈ ಸಮಯದಲ್ಲಿ ಬೇಲಿ ಹಾಗೂ ಗೇಟ್ ಹಾರಿ ಪ್ರವಾಸಿಗರು ಹಾಗೂ ಸ್ಥಳೀಯರು ಚಿಕ್ಲಿಹೊಳೆ ಜಲಾಶಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಕೇಳಲು ಯಾರೂ ಕೂಡ ಇಲ್ಲ ಎಂಬ ಧೈರ್ಯದಿಂದ ಸ್ನಾನ ಮಾಡಲು ನೀರಿಗಿಳಿದು ಜೀವದೊಂದಿಗೆ ಚೆಲ್ಲಾಟ (ಮೊದಲ ಪುಟದಿಂದ) ಆಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ನೀರಿನ ಬದಿಯಲ್ಲಿ ಕುಳಿತು ಮದ್ಯಪಾನ ಕೂಡ ಮಾಡುತ್ತಿದ್ದಾರೆ. ಅಲ್ಲಲ್ಲಿ ಮದ್ಯದ ಬಾಟಲಿಗಳು ಕಾಣುತ್ತಿದೆ. ಸಂಜೆಯ ನಂತರ ನಿರ್ವಾಹಕರಿಲ್ಲದೆ ಡ್ಯಾಂ ನಲ್ಲಿ ಪ್ರವಾಸಿಗರು ತಮ್ಮ ಮನಬಂದAತೆ ವರ್ತಿಸುತ್ತಿದ್ದಾರೆ. ಸಂಜೆ ೫:೩೦ ನಂತರ ಡ್ಯಾಂ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸಲು ಮತ್ತೊಬ್ಬ ಡ್ಯಾಂ ವಾಚ್ ಮ್ಯಾನ್ನನ್ನು ಸರ್ಕಾರ ನೇಮಿಸಬೇಕಾಗಿದೆ.
ಮೂರು ತಿಂಗಳಿನಿAದ ಕೈ ಸೇರದ ಸಂಬಳ
ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.ಈ ದಿನಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದೆ. ಗುತ್ತಿಗೆ ಆಧಾರದಲ್ಲಿ ಡ್ಯಾಂ ವಾಚ್ಮ್ಯಾನ್ ಕೆಲಸ ಮಾಡುತ್ತಿರುವ ಮೇದಪ್ಪ ಅವರಿಗೆ ಕಳೆದ ಮೂರು ತಿಂಗಳಿನಿAದ ದುಡಿದ ಸಂಬಳ ಕೂಡ ಕೈ ಸೇರಿಲ್ಲ. ಹಾಗೂ ಒಬ್ಬರೇ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ಇಲಾಖೆಯವರು ಒಮ್ಮೆ ಗಮನಹರಿಸಬೇಕಾಗಿದೆ.
ನೆಟ್ ಅಳವÀಡಿಸಲು ಒತ್ತಾಯ
ನೀರಿಗಿಳಿಯಬೇಡಿ ಎಂದು ಹಲವು ಬಾರಿ ಸೂಚನೆ ನೀಡಿದರೂ ಸಹ ಕೇಳುತ್ತಿಲ್ಲ. ನನ್ನ ವಿರುದ್ಧವೇ ತಿರುಗಿ ಬೀಳುತ್ತಾರೆ. ಕಣ್ತಪ್ಪಿಸಿ ನೀರಿಗಿಳಿಯಲು ಪ್ರಯತ್ನಿಸುತ್ತಾರೆ. ನಾನೊಬ್ಬನೇ ಡ್ಯಾಂ ವಾಚ್ಮ್ಯಾನ್ ಇರುವುದು ಎಂದು ಮೇದಪ್ಪ ಹೇಳುತ್ತಾರೆ. ಚಿಕ್ಲಿಹೊಳೆ ಜಲಾಶಯದಲ್ಲಿ ೬೦ ಅಡಿ ಆಳದಲ್ಲಿ ನೀರಿದೆ. ಹಾಗೂ ನೀರಿನ ಅಲ್ಲಲ್ಲಿ ಬೃಹತ್ ಗುಂಡಿಗಳಿವೆ. ಇದರ ಬಗ್ಗೆ ಮಾಹಿತಿ ಇಲ್ಲ. ಸ್ನಾನ ಮಾಡಲು ನೀರಿಗಿಳಿದು ಪ್ರಾಣ ಕಳೆದುಕೊಳ್ಳಲು ಮುಂದಾಗುತ್ತಿದ್ದಾರೆ. ಪ್ರವಾಸಿಗರು ಹಾಗೂ ಸ್ಥಳೀಯರು ನೀರಿಗಿಳಿಯದಂತೆ ತಡೆಗಟ್ಟಲು ನೀರಿನ ಬದಿಯ ಸುತ್ತಲೂ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ಇಲಾಖೆಯವರು ನೆಟ್ ಅಳವಡಿಸಿ ಜನರು ನೀರಿಗಿಳಿಯದಂತೆ ತಡೆಗಟ್ಟಿ, ಪ್ರಾಣ ಹೋಗುವುದನ್ನು ತಪ್ಪಿಸಬೇಕಾಗಿದೆ.
- ಕೆ.ಎಂ ಇಸ್ಮಾಯಿಲ್ ಕಂಡಕರೆ