ಸೋಮವಾರಪೇಟೆ, ಸೆ. ೨೦: ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣ ಪಂಚಾಯಿತಿಯ ಪ್ರತಿ ವಾರ್ಡ್ಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಅಧ್ಯಕ್ಷ ಎಚ್.ಎ. ನಾಗರಾಜ್ ತಿಳಿಸಿದ್ದಾರೆ.
೧೫ ದಿನಕೊಮ್ಮೆ ಒಂದೊAದು ವಾರ್ಡ್ಗಳಿಗೆ ತೆರಳಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲಾಗುವುದು. ಪ್ರತಿವಾರ್ಡ್ಗಳಲ್ಲಿ ನಿವೇಶನ ರಹಿತರಿದ್ದು, ನಿಜವಾದ ಬಡವರು, ನಿರ್ಗತಿಕರಿಗೆ ಪಂಚಾಯಿತಿಯಿAದ ನಿವೇಶನ ಕೊಡಿಸುವ ಪ್ರಯತ್ನ ಮಾಡಲಾಗುವುದು, ಪಂಚಾಯಿತಿ ವಿಳಂಬದೋರಣೆ ಅನುಸರಿಸಿದರೆ ಹೋರಾಟ ಸಂಘಟಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿ ವಾರ್ಡ್ಗಳಲ್ಲಿ ಸಮಸ್ಯೆ ಗಳಿವೆ. ಬಡವರ ಸಂಕಷ್ಟಕ್ಕೆ ಪಂಚಾಯಿತಿ ಸ್ಪಂದಿಸುತ್ತಿಲ್ಲ. ಪಂಚಾಯಿತಿ ಆಸ್ತಿ ಬಿಜೆಪಿಯ ಸ್ವತ್ತಾಗಿದೆ. ಎಸ್.ಸಿ.ಎಸ್.ಟಿಗೆ ಮೀಸ ಲಾಗಿರುವ ವಾಣಿಜ್ಯ ಮಳಿಗೆಯಲ್ಲಿ ಪಂಚಾಯಿತಿ ಹಾಲಿ ನಾಮ ನಿರ್ದೇಶಿತ ಸದಸ್ಯರೊಬ್ಬರ ತಂದೆ ಕಳೆದ ನಾಲ್ಕು ವರ್ಷದಿಂದ ಬಾಡಿಗೆಯಿಲ್ಲದೆ ತೆಂಗಿನಕಾಯಿ ಗೋದಾಮು ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗದAತೆ ಎಲ್ಲಾ ತಂತ್ರಗಳನ್ನು ಮಾಡಲಾಗುತ್ತಿದೆ. ಕಾವೇರಿ ಕ್ಯಾಂಟಿನ್ ಎಂದು ಹೆಸರು ಬದಲಾಯಿಸಲು ಇಲ್ಲಿನ ಶಾಸಕರು ಅಗ್ರಹ ಮಾಡುತ್ತಿದ್ದಾರೆ. ಮೊದಲು ಕ್ಯಾಂಟಿನ್ ಪ್ರಾರಂಭಿಸಿ, ನಂತರ ಹೆಸರು ಬದಲಾಯಿಸಲಿ. ಮಿನಿ ವಿಧಾನಸೌಧಕ್ಕೆ ಕಾವೇರಿ ಭವನ ಎಂದು ಹೆಸರಿಡಲು ಮುಂದಾಗಲಿ ಎಂದು ಸವಾಲು ಹಾಕಿದರು.
ಶಾಸಕರು ಮತ್ತು ಬಿಜೆಪಿ ಪ್ರಮುಖರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇಂದಿರಾಗಾAಧಿ ಅಭಿಮಾನಿಗಳ ಸಂಘದವರು ನಿರ್ಮಿಸಿದ್ದ ಬಸ್ ತಂಗುದಾಣವನ್ನು ನೆಲಸಮ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯದೆ ಹೈವೆ ಮಾರ್ಜಿನ್ ಬೀಡದೆ ಬಸ್ ತಂಗುದಾಣವನ್ನು ನಿರ್ಮಿಸುತ್ತಿದ್ದಾರೆ. ತಂಗುದಾಣಕ್ಕೆ ಇಂದಿರಾಗಾAಧಿ ಹೆಸರು ಇಡದಿದ್ದರೆ, ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪಂಚಾಯಿತಿ ಮುಖ್ಯಾಧಿಕಾರಿ ಬಿಜೆಪಿ ಕಾರ್ಯಕರ್ತ ರಂತೆ ಕೆಲಸ ಮಾಡುತ್ತಿದ್ದಾರೆ. ಎಸ್.ಸಿ.ಎಸ್.ಟಿ. ಅನುದಾನವನ್ನು ಸರಿಯಾಗಿ ವಿನಿಯೋಗಿಸುತ್ತಿಲ್ಲ. ಕೆಲ ಹೊಟೇಲ್ ಮಾಲೀಕರ ಒತ್ತಡಕ್ಕೆ ಮಣಿದು ಇಂದಿರಾ ಕ್ಯಾಂಟೀನ್ ಪ್ರಾರಂಭವಾಗದAತೆ ನೋಡಿಕೊಂಡಿ ದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದು ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದೆ. ಮೈಸೂರಿನಲ್ಲಿ ಈಗಾಗಲೇ ದೇವಾಲಯವನ್ನು ಕೆಡವಲಾಗಿದೆ ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸೇವಾದಳ ತಾಲೂಕು ಘಟಕದ ಅಧ್ಯಕ್ಷ ಬಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮಂಜುನಾಥ್, ಎಸ್ಸಿ, ಎಸ್ಟಿ ತಾಲೂಕು ಘಟಕದ ಕಾರ್ಯದರ್ಶಿ ಎಚ್.ಬಿ. ರಾಜಪ್ಪ, ಪ್ರಮುಖರಾದ ರಘು ಇದ್ದರು.