ಮುಳ್ಳೂರು, ಸೆ. ೨೦: ಪಾಶ್ಚಾö್ಯತೀಕರಣ ವ್ಯಾಮೋಹ ಮತ್ತು ಇಂಗ್ಲೀಷ್ ಭಾಷೆಯ ಪ್ರಭಾವದಿಂದ ಕನ್ನಡ ಭಾಷೆ ಸೇರಿದಂತೆ ಪ್ರತಿ ವರ್ಷವೂ ೧೦ ರಿಂದ ೧೫ ಭಾಷೆಗಳು ನಶಿಸಿ ಹೋಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಬೆಂಗಳೂರಿನ ಬಾಗಲೂರು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ನಂಗಾರು ನಿಂಗರಾಜು ಆತಂಕ ವ್ಯಕ್ತ ಪಡಿಸಿದರು.
ಅವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಸಂಗಯ್ಯನಪುರ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯುತ್ತಿರುವ ಅರೆಭಾಷೆ ಸಂಸ್ಕೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಾಶ್ಚö್ಯಮಾತ್ಯ ಮತ್ತು ಇಂಗ್ಲೀಷ್ ಪ್ರಭಾವ ಇಂದು ಕನ್ನಡ ಭಾಷೆಯನ್ನೂ ಬಿಟ್ಟಿಲ್ಲ; ಇಂತಹ ಸನ್ನಿವೇಶದಲ್ಲಿ ಅರೆಭಾಷೆಯೂ ನಶಿಸಿ ಹೋಗುವ ಸಾಧ್ಯತೆಯನ್ನು ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಶಿಬಿರಗಳನ್ನು ಹೆಚ್ಚಾಗಿ ನಡೆಸುವ ಮೂಲಕ ದೂರ ಮಾಡಬೇಕಿದೆ ಎಂದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ವಿಶಿಷ್ಟವಾಗಿದ್ದು, ಅದರಲ್ಲಿ ಉಪಭಾಷೆಗಳಲ್ಲಿ ಒಂದಾದ ಅರೆಭಾಷೆ ಮತ್ತು ಸಂಸ್ಕೃತಿ ಮತ್ತಷ್ಟು ವಿಶಿಷ್ಟತೆಯಿಂದ ಕೂಡಿದೆ. ಮೂಲ ದ್ರಾವಿಡ ಭಾಷೆಯಿಂದ ಬಂದ ಅರೆಭಾಷೆ ಹಾಗೂ ಸಂಸ್ಕೃತಿ ಹಲವು ಶತಮಾನಗಳ ಇತಿಹಾಸ ಹೊಂದಿದೆ ಎಂದರು. ಬ್ರಿಟೀಷ್ ವಿರುದ್ಧ ೧೮೫೭ರ ಸಿಪಾಯಿ ದಂಗೆ ಸಂದರ್ಭದಲ್ಲಿ ಅರೆಭಾಷೆ ಗೌಡ ಸಮುದಾಯದ ಹಿರಿಯರು ಸ್ವತಂತ್ರö್ಯಕ್ಕಾಗಿ ಹೋರಾಡಿದ್ದು÷ ಇದರಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರ ಕೊಡುಗೆ ಅಪಾರವಾದದ್ದು. ಈ ಹಿನ್ನೆಲೆಯಲ್ಲಿ ಸರಕಾರ ಅಪ್ಪಯ್ಯಗೌಡರ ಹೆಸರಿನಲ್ಲಿ ಮಂಗಳೂರು ವಿ.ವಿ. ನಿಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಅನುಮತಿ ನೀಡಲು ನಿರಾಕರಿಸುತ್ತಿರುವ ಸಂದರ್ಭದಲ್ಲಿ ಸಮುದಾಯ ಒಗ್ಗಟ್ಟಾಗಿ ಹೋರಾಟದ ಮೂಲಕ ಪೀಠ ಸ್ಥಾಪನೆಗಾಗಿ ಪ್ರಯತ್ನಿಸಬೇಕಾಗಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಸಮುದಾಯ, ಭಾಷೆ, ಸಂಸ್ಕೃತಿ ಉಳಿವಿಗಾಗಿ ಸ್ಥಾಪಿತವಾಗಿದ್ದು, ಇದರ ಉಳಿವಿಗೋಸ್ಕರ ಅಕಾಡೆಮಿ ವತಿಯಿಂದ ಸಂಸ್ಕೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು. ಅರೆಭಾಷೆ, ಸಾಹಿತ್ಯ, ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರಗಳನ್ನು ಇಂದಿನ ಯುವ ಸಮೂಹ ತಿಳಿದುಕೊಳ್ಳುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಅಕಾಡೆಮಿ ಅಭಿವೃದ್ಧಿಗಾಗಿ ಮತ್ತು ಸಮುದಾಯದ ಮುಂದಿನ ಪೀಳಿಗೆಯವರಿಗಾಗಿ ಸಮುದಾಯದ ಪ್ರತಿಯೊಬ್ಬರೂ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ತಾ.ಪಂ. ಮಾಜಿ ಸದಸ್ಯೆ ಭಟ್ಯನ ಸವಿತ ಈರಪ್ಪ, ಹಿರಿಯರಾದ ಕಡ್ಯದ ಮಾಚಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್, ಅಕಾಡೆಮಿ ಸದಸ್ಯ ಧನಂಜಯ್, ಪ್ರಮುಖರಾದ ಅತ್ಯಾಡಿ ಪೂವಯ್ಯ, ಕಡ್ಯದ ಶ್ಯಾಮಲ ತಾರಣ್ಣಯ್ಯ, ಎಡಿಕೇರಿ ಜಯರಾಮ್, ಪರ್ಲಕೋಟಿ ಭವಾನಿ ತಮ್ಮಯ್ಯ ಮುಂತಾದವರು ಇದ್ದರು.