ಮಡಿಕೇರಿ, ಸೆ. ೨೧: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸಾಧಕ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಡಿಕೇರಿ ರೋಟರಿ ಸಭಾಂಗಣ ದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ವನಿತಾ ಚಂಗಪ್ಪ, ಕಾಂಡನಕೊಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಸವಿ ಕವೀಂದ್ರ, ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜ್‌ನ ಉಪ ಪ್ರಾಂಶುಪಾಲರಾದ ನಳಿನಿ ಪೂವಯ್ಯ ಅವರನ್ನು ರೋಟರಿ ಅಧ್ಯಕ್ಷ ಎನ್. ಅಚ್ಚಯ್ಶ, ಕಾರ್ಯದರ್ಶಿ ಲಲಿತಾ ರಾಘವನ್ ಮತ್ತು ರೋಟರಿ ಉಪರಾಜ್ಯಪಾಲ ಅನಿಲ್ ಹೆಚ್.ಟಿ ಸನ್ಮಾನಿಸಿ ಗೌರವಿಸಿದರು..

ಈ ಸಂದರ್ಭ ಮಾತನಾಡಿದ ರೋಟರಿ ಉಪರಾಜ್ಯಪಾಲ ಅನಿಲ್ ಮಡಿಕೇರಿ, ಸೆ. ೨೧: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸಾಧಕ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಡಿಕೇರಿ ರೋಟರಿ ಸಭಾಂಗಣ ದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ವನಿತಾ ಚಂಗಪ್ಪ, ಕಾಂಡನಕೊಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಸವಿ ಕವೀಂದ್ರ, ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜ್‌ನ ಉಪ ಪ್ರಾಂಶುಪಾಲರಾದ ನಳಿನಿ ಪೂವಯ್ಯ ಅವರನ್ನು ರೋಟರಿ ಅಧ್ಯಕ್ಷ ಎನ್. ಅಚ್ಚಯ್ಶ, ಕಾರ್ಯದರ್ಶಿ ಲಲಿತಾ ರಾಘವನ್ ಮತ್ತು g

ೆÆÃಟರಿ ಉಪರಾಜ್ಯಪಾಲ ಅನಿಲ್ ಹೆಚ್.ಟಿ ಸನ್ಮಾನಿಸಿ ಗೌರವಿಸಿದರು..

ಈ ಸಂದರ್ಭ ಮಾತನಾಡಿದ ರೋಟರಿ ಉಪರಾಜ್ಯಪಾಲ ಅನಿಲ್ ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ ಪುಸ್ತಕಗಳನ್ನು ಕೊಡಗಿನ ೨೦೦೦ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗಿದ್ದು ೧೦ನೇ ತರಗತಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯಕ್ಕೆ ರೋಟರಿ ಈ ಮೂಲಕ ಮುಂದಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವನಿತಾ ಚಂಗಪ್ಪ, ಪ್ರತೀಯೋರ್ವರು ಒಂದಲ್ಲ ಒಂದು ರೀತಿಯಲ್ಲಿ ಕಲಿಸುತ್ತಲೇ ಇರುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಉತ್ತಮ ವಿಚಾರಗಳನ್ನು ಯಾರೆಲ್ಲಾ ಕಲಿಸುವಲ್ಲಿ ಸಮರ್ಥರಿರುತ್ತಾರೆಯೋ ಅವರೆಲ್ಲಾ ಉತ್ತಮ ಗುರುಗಳೇ ಆಗಿದ್ದಾರೆ ಎಂದರು.

ಸನ್ಮಾನಿತೆ ನಳಿನಿ ಪೂವಯ್ಯ ಮಾತನಾಡಿ, ರೋಟರಿ ಸಂಸ್ಥೆ ಕೊಡಗಿನ ಶಾಲೆಗೆ ಅನೇಕ ಯೋಜನೆಗಳ ಮೂಲಕ ಸವಲತ್ತುಗಳನ್ನು ನೀಡಿದೆ. ವಿದ್ಯಾರ್ಥಿಗಳ ಬೇಡಿಕೆಗಳಿಗೆ ರೋಟರಿ ಸಂಸ್ಥೆಗಳು ಸ್ಪಂದಿಸುತ್ತಿದ್ದು, ಇದರಿಂದ ಸೌಲಭ್ಯವಂಚಿತ ಅನೇಕ ಗ್ರಾಮೀಣ ಶಾಲೆಗಳಿಗೆ ಉಪಯೋಗವಾಗಿದೆ ಎಂದೂ ಶ್ಲಾಘಿಸಿದರು.

ಸನ್ಮಾನಿತೆ ಸವಿ ಕವೀಂದ್ರ ಮಾತನಾಡಿ, ಗ್ರಾಮೀಣ ಶಾಲೆಯ ಪ್ರಗತಿಗೆ ರೋಟರಿ ನೆರವು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ವಿರುವ ಸೌಲಭ್ಯಗಳನ್ನು ದಾನಿಗಳು ನೀಡಲು ಪ್ರೇರಕವಾಗಿದೆ ಎಂದರು.

ಮಡಿಕೇರಿ ರೋಟರಿ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ ಮಾತನಾಡಿ, ಮೂವರು ಶಿಕ್ಷಕಿಯರನ್ನು ಸನ್ಮಾನಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಬದ್ದತೆಯನ್ನು ಶಿಕ್ಷಕರ ಸಮುದಾಯವನ್ನೇ ರೋಟರಿ ಗೌರವಿಸುತ್ತಿದೆ ಎಂದರು.

ಮಡಿಕೇರಿ ರೋಟರಿ ಕಾರ್ಯದರ್ಶಿ ಲಲಿತಾ ರಾಘವನ್, ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.