*ಸಿದ್ದಾಪುರ ಸೆ.೨೧ : ನೆಲ್ಯಹುದಿಕೇರಿಯಲ್ಲಿರುವ ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿ ಪಥದತ್ತ ಸಾಗುತ್ತಿದೆ. ಸದಸ್ಯರಿಗೆ ನೆರವಾಗಲು ಮತ್ತು ಆರ್ಥಿಕ ಸಬಲತೆಗಾಗಿ ಸಂಘದ ಯುವ ಮುಖಂಡತ್ವದ ಆಡಳಿತ ಮಂಡಳಿ ನೂತನ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿದೆ.

ಪ್ರಸ್ತುತ ಸಂಘದ ಅಧ್ಯಕ್ಷರಾಗಿರುವ ಪಾಲಚಂಡ ಸಿ.ಅಚ್ಚಯ್ಯ ಅವರ ನೇತೃತ್ವದ ತಂಡ ಪ್ರಗತಿಪರ ಯೋಜನೆಗಳನ್ನು ರೂಪಿಸಿದೆ. ಅನೇಕ ಹಿರಿಯರು ಕಟ್ಟಿ ಬೆಳೆಸಿದ ಸಂಘವನ್ನು ಇಂದಿನ ಪೀಳಿಗೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ವಾಣಿಜ್ಯ ಸಂಕೀರ್ಣವನ್ನು ಖರೀದಿಸುವ ಮೂಲಕ ಆರ್ಥಿಕ ಬಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಮಾಸಿಕ ಸುಮಾರು ೪೦ ಸಾವಿರ ರೂ. ಆದಾಯ ಬರುವ ಸಂಕೀರ್ಣ ತಾ. ೨೮ ರಂದು ಉದ್ಘಾಟನೆಗೊಳ್ಳಲಿದೆ.

ಪೆಟ್ರೋಲ್ ಬಂಕ್ ಆರಂಭಿಸುವ ಬಗ್ಗೆ ಯೋಜನೆ ರೂಪಿಸಲಾಗಿದ್ದು, ಅಗತ್ಯವಿರುವ ಜಮೀನನ್ನು ಈಗಾಗಲೇ ಖರೀದಿಸಲಾಗಿದೆ. ಈಗಿನ ಆಡಳಿತ ಮಂಡಳಿ ಠೇವಣಿ ಸಂಗ್ರಹವನ್ನು ಹೆಚ್ಚು ಮಾಡಿದೆ, ಪಿಗ್ಮಿ ಸಂಗ್ರಹಾತಿ ಯಶಸ್ವಿಯಾಗಿ ನಡೆಯುತ್ತಿದೆ. ರೈತರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಂಘದ ಮೂಲಕವೇ ದೊರೆಯುತ್ತಿರುವುದು ವಿಶೇಷ.

೧೯೭೦ ರಲ್ಲಿ ಸ್ಥಾಪನೆಯಾದ ಸಂಘ ಕೆದಂಬಾಡಿ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಾರಂಭಿಸಿತು. ಕೊಂಗೇರ ಬೋಪಯ್ಯ ಅವರು ಸತತ ೩೦ ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಸಂಘದ ಮುನ್ನಡೆಗೆ ಕಾರಣಕರ್ತರಾಗಿ ದ್ದಾರೆ. ಇದೀಗ ಬಂದಿರುವ ಯುವ ಆಡಳಿತ ಮಂಡಳಿ ಸಂಘವನ್ನು ಮತ್ತಷ್ಟು ಬಲಗೊಳಿಸಿದ್ದು, ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಪಾಧ್ಯಕ್ಷ ಟಿ.ಸಿ. ಅಶೋಕ, ನಿರ್ದೇಶಕರಾದ ಹೆಚ್.ಎಸ್. ವಸಂತಕುಮಾರ್, ಕೆ.ಎ. ಬೋಪಯ್ಯ, ಕೆ.ಎಂ. ಪ್ರಸನ್ನ, ಟಿ.ಎ. ಪ್ರಸನ್ನ, ಟಿ.ಬಿ. ಗಣೇಶ್, ಡಿ.ಜಿ. ಅಜಿತ್ ಕುಮಾರ್, ಎಂ.ಎನ್. ಹರಿಣಿ, ವಿ.ಕೆ. ಸುನೀಲ್ ಕುಮಾರ್, ಆರ್. ಸುಧರ್ಮ, ಎಂ. ಧರ್ಮಲಿಂಗ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಂಘದ ಪ್ರಗತಿಯಲ್ಲಿ ಕೈಜೋಡಿಸಿದ್ದಾರೆ.

ಸಂಘದ ಅಧ್ಯಕ್ಷ ಪಾಲಚಂಡ ಸಿ.ಅಚ್ಚಯ್ಯ ಅವರ ಅಧ್ಯಕ್ಷತೆಯಲ್ಲಿ ತಾ. ೨೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಾಣಿಜ್ಯ ಸಂಕೀರ್ಣವನ್ನು ಮತ್ತು ಸಭಾ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೆ.ಪಿ.ಗಣಪತಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸೋಮವಾಪೇಟೆ ತಾ.ಪಂ ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ ಸಾಬು ವರ್ಗೀಸ್, ಉಪಾಧ್ಯಕ್ಷೆ ದಮಯಂತಿ, ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಅಧ್ಯಕ್ಷೆ ಅನಿತಾ, ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಬಿ. ಶಿವಪ್ಪ, ಪಿ.ಡಿ. ಚೀಯಣ್ಣ, ಕೆ.ಎಂ. ಜಯ ಕುಮಾರ್, ಎನ್. ಎಂ. ಮೇದಪ್ಪ, ಕೆ.ಎ. ಬೋಪಯ್ಯ, ಬೆಳೆಗಾರ ಕೆ.ಎ. ವಿಶ್ವಾನಾಥ್, ಶ್ರೀ ಸತ್ಯನಾರಾಯಣ ದವಸ ಭಂಡಾರ ಅಧ್ಯಕ್ಷ ಹೆಚ್.ಎನ್. ಮಾದಪ್ಪ, ಹಿರಿಯ ಸಹಕಾರಿ ಹಾಗೂ ಕಾಫಿ ಬೆಳೆಗಾರ ಟಿ.ಬಿ. ತಿಮ್ಮಯ್ಯ, ನೆಲ್ಯಹುದಿಕೇರಿ ಆಂಗ್ಲೋ ವರ್ಣಾಕುಲರ್ ಶಾಲೆಯ ಎ.ಪಿ. ಮಹಮ್ಮದ್, ತಾ.ಪಂ. ಮಾಜಿ ಸದಸ್ಯೆ ಸುಹಾದ ಅಶ್ರಪ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. -ಅಂಚೆಮನೆ ಸುಧಿ