ಪೆರಾಜೆ, ಸೆ. ೨೦: ಇಲ್ಲಿಗೆ ಸಮೀಪದ ಕುಂಬಳಚೇರಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಮಾತೃವಂದನಾ ಯೋಜನೆ ಯಲ್ಲಿ ಅಂಗನವಾಡಿಯಿAದ ಸಿಗುವ ಸವಲತ್ತು ಬಗ್ಗೆ ಕಾರ್ಯಕರ್ತೆ ಯುವಕಲಾ ತಿಳಿಸಿದರು. ಪೌಷ್ಟಿಕ ಆಹಾರದ ಬಗ್ಗೆ ಮಲ್ಲಿಕಾರ್ಜುನ ಸ್ಥಳೀಯ ಆಹಾರದ ಬಗ್ಗೆ ಕನಕಾಂಬಿಕೆ ಮಾಹಿತಿ ನೀಡಿದರು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ವನಿತಾ ಎನ್.ಹೆಚ್, ಗ್ರಾಮ ಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ, ಆರೋಗ್ಯ ಸಹಾಯಕ ರಘು, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶೈಲಜಾ, ಆಶಾಕಾರ್ಯಕರ್ತೆ ಹೇಮಾಲತ, ಶಾಲಾ ಶಿಕ್ಷಕಿ ಶಾಂತಲಾ, ಎನ್.ಸಿ.ಆರ್.ಪಿ.ಶೀಲಾ, ಅಂಗನವಾಡಿ ಸಹಾಯಕಿ ರುಕ್ಮಿಣಿ ಸೇರಿದಂತೆ ಗರ್ಭಿಣಿಯರು, ತಾಯಂದಿರು, ಮಕ್ಕಳು, ಪೋಷಕರು ಭಾಗವಹಿಸಿದ್ದರು.