ಶನಿವಾರಸಂತೆ, ಸೆ. ೨೦: ಕೊರೊನಾ ಸೃಷ್ಟಿಸಿರುವ ಸಾವು- ನೋವು ಸಂಕಷ್ಟದ ಸಂದರ್ಭದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರ ಅದನ್ನು ತಡೆಗಟ್ಟಬೇಕು ಹಾಗೂ ಅಪರಾಧಿ ಗಳಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ದಸಂಸ ವತಿಯಿಂದ ನಾಡ ಕಚೇರಿಯ ಕಂದಾಯ ಪರಿವೀಕ್ಷಕ ಮಂಜುನಾಥ್ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವೇದಿಕೆಯ ಜಿಲ್ಲಾ ಅಧ್ಯಕ್ಷ ಜಿ.ಆರ್. ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ವೀರೇಂದ್ರ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜೆ.ಎಲ್. ಜನಾರ್ಧನ್, ಕಾರ್ಯದರ್ಶಿ ವಿರೂಪಾಕ್ಷ ಸಂದೀಪ್, ಶನಿವಾರಸಂತೆ ಅಧ್ಯಕ್ಷ ಶಿವಲಿಂಗಪ್ಪ, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ವೀರಭದ್ರ, ತಾಲೂಕು ಕಾರ್ಯದರ್ಶಿ ಇಂದ್ರೇಶ್, ಪ್ರಮುಖರಾದ ಎಂ.ಕೆ. ಮಂಜುನಾಥ್, ನಟರಾಜ್ ಡಿ.ಎಸ್. ವಸಂತ್, ದೇವರಾಜ್, ಪೃಥ್ವಿರಾಜ್, ಭರತ್, ದಿಲೀಪ್, ರಾಜು, ಜಗ, ಸಣ್ಣಯ್ಯ, ಸಾಗರ್, ಗೌತಮ್, ನಟರಾಜ್, ಚಂದ್ರ ಇದ್ದರು.