ಶನಿವಾರಸAತೆ, ಸೆ. ೨೦: ೮ ತಿಂಗಳ ಹಿಂದೆ ಕೊಡ್ಲಿಪೇಟೆಯ ಮುಖ್ಯ ರಸ್ತೆಯಲ್ಲಿ ಬೈಕ್ಗೆ ಹಿಂಬದಿಯಿAದ ಡಿಕ್ಕಿಪಡಿಸಿ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಲು ಕಾರಣನಾಗಿ, ಸ್ಥಳದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಟಿಪ್ಪರ್ ಚಾಲಕನನ್ನು ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಲೋಕೇಶ್, ಮುರಳಿ ಹಾಗೂ ಎಎಸ್ಐ ಶಿವಲಿಂಗ ಬೆಂಗಳೂರಿನ ತಾವರೆಕೆರೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿಯ ಟಿಪ್ಪರ್ ಚಾಲಕ ಕೆ. ಶಿವರಾಜ್ ಕುಮಾರ್ ಬಂಧಿತ ಆರೋಪಿ. ಈತ ಕೊಡ್ಲಿಪೇಟೆಯ ಮುಖ್ಯ ರಸ್ತೆಯಲ್ಲಿ ಕಳೆದ ಜನವರಿ ತಿಂಗಳ ೧೭ ರಂದು ಹಾಸನ ಜಿಲ್ಲೆ ಕುದುರುವಳ್ಳಿ ಗ್ರಾಮದ ರುದ್ರೇಶ್ ಅವರ ಬೈಕ್ಗೆ ಹಿಂಬದಿಯಿAದ ಡಿಕ್ಕಿಪಡಿಸಿದ್ದ. ಬೈಕ್ ಚಾಲಕ ರುದ್ರೇಶ್ ಗಾಯಗೊಂಡು ಹಿಂಬದಿ ಸವಾರ ಕ್ಯಾತೆ ಗ್ರಾಮದ ಶಿವಣ್ಣ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.
ಸ್ಥಳದಿಂದ ಪರಾರಿಯಾಗಿದ್ದ ಶಿವರಾಜ್ ಕುಮಾರ್ ಮೇಲೆ ಕ್ರಮಕೈಗೊಳ್ಳುವಂತೆ ಬೈಕ್ ಮಾಲೀಕ ರುದ್ರೇಶ್ ದೂರು ಸಲ್ಲಿಸಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಜನವರಿ ೧೭ ರಂದು ಪ್ರಕರಣ ದಾಖಲಾಗಿತ್ತು.
ಆರೋಪಿ ಶಿವರಾಜಕುಮಾರ್ನನ್ನು ತಾ. ೧೮ ರಂದು ಬೆಂಗಳೂರಿನ ತಾವರೆಕೆರೆಯಲ್ಲಿ ಬಂಧಿಸಲಾಯಿತು. ತಾ. ೧೯ ರಂದು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.