ಶನಿವಾರಸಂತೆ, ಸೆ. ೨೧: ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯ ತ್ಯಾಗರಾಜ ಕಾಲೋನಿಯ ಸಮುದಾಯ ಭವನದ ಪಕ್ಕದಲ್ಲಿ ರೂ. ೩ ಲಕ್ಷದ ಚರಂಡಿ ಕಾಮಗಾರಿಗೆ ಹಾಗೂ ಶ್ರೀ ವಿಜಯ ವಿನಾಯಕ ದೇವಸ್ಥಾನದ ಮುಂಭಾಗ ರೂ. ೪ ಲಕ್ಷದ ಚರಂಡಿ ಕಾಮಗಾರಿಗೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್, ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಎಸ್.ಎನ್. ರಘು, ಸರಸ್ವತಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಲೆಕ್ಕ ಸಹಾಯಕ ವಸಂತ, ಗುತ್ತಿಗೆದಾರ ಅಬ್ದುಲ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.