ಮಡಿಕೇರಿ, ಸೆ.೨೦: ಭಾರತದ ಸ್ವಾತಂತ್ರö್ಯದ ಅಮೃತ ಮಹೋತ್ಸವದಂದು ಮುಖ್ಯಮಂತ್ರಿಯವರು ಘೋಷಣೆ ಮಾಡಿದ ೧೩ ಅಮೃತ ಯೋಜನೆಗಳ ಪೈಕಿ ಸ್ತಿçÃಶಕ್ತಿ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ಪ್ರತಿ ಗುಂಪಿಗೆ ರೂ. ೧.೦೦ ಲಕ್ಷಗಳಂತೆ ಬಂಡವಾಳ ನಿಧಿ ನೀಡುವ ಅಮೃತ ಸ್ವಸಹಾಯ ಕಿರು ಉದ್ದಿಮೆಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ೬೦ ಮಹಿಳಾ ಸ್ತಿçÃಶಕ್ತಿ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸಲು ಗುರಿ ನೀಡಿದ್ದು, ಅರ್ಹ ಸ್ತಿçÃಶಕ್ತಿ ಗುಂಪುಗಳಿAದ ಅರ್ಜಿ ಆಹ್ವಾನಿಸಲಾಗಿದೆ.

ಸ್ತಿçÃಶಕ್ತಿ ಗುಂಪುಗಳು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಡಿ (ಜಿ.ಪಿ.ಎಲ್.ಎಫ್.) ನೋಂದಾಯಿಸಿರಬೇಕು. ಮತ್ತು ಸಮುದಾಯ ಬಂಡವಾಳ ನಿಧಿ (ಸಿ.ಐ.ಎಫ್.)ಪಡೆದಿರಬೇಕು. ಹಾಗೂ ಇನ್ನಿತರೆ ಮಾನದಂಡ ನಿಗದಿಪಡಿಸಿದಲಾಗಿದೆ. ಕಿರು ಉದ್ದಿಮೆ ಸ್ಥಾಪನೆ ಸಂಬAಧ ಅರ್ಜಿ ಸಲ್ಲಿಸಲು ತಾ. ೨೫ ಕೊನೆಯ ದಿನವಾಗಿದೆ. ಕಿರು ಉದ್ದಿಮೆ ಸ್ಥಾಪಿಸಲು ಆಸಕ್ತಿ ಹೊಂದಿರುವ ಸ್ತಿçÃಶಕ್ತಿ ಗುಂಪುಗಳು ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಡಿಕೇರಿ (೯೩೪೨೧೫೨೮೦೭) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸೋಮವಾರಪೇಟೆ (೦೮೨೭೬ ೨೮೨೨೮೧), ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಪೊನ್ನಂಪೇಟೆ (೦೮೨೭೪ ೨೪೯೦೧೦), ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ (೮೦೮೮೦೬೩೧೯೬, ೦೮೨೭೨ ೨೯೮೩೭೯) ಇವರನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.