ಮಡಿಕೇರಿ, ಸೆ. ೨೧: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನು ವಿಧಿಸಿ ವೀರಾಜಪೇಟೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಅಸ್ಸಾಂ ರಾಜ್ಯದಿಂದ ಕೂಲಿ ಕೆಲಸಕ್ಕಾಗಿ ಪೊನ್ನಂಪೇಟೆ ಸಮೀಪ ಹುದಿಕೇರಿ ಹೈಸುಡ್ಲೂರು ಗ್ರಾಮಕ್ಕೆ ಬಂದ ಸುಹರ್ ಅಲಿ ಅಲಿಯಾಸ್ ಚಹರ್ ಅಲಿ (೩೧) ಎಂಬಾತ ೨೦೧೬ರಲ್ಲಿ ಹೈಸೊಡ್ಲೂರು ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಈ ಸಂಬAಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಆಗಿನ ವೀರಾಜಪೇಟೆ ಪೊಲೀಸ್ ಉಪಾಧೀಕ್ಷಕ ನಾಗಪ್ಪರವರು ಕೈಗೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಾಣಾ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆಯನ್ನು ನಡೆಸಿದ ನ್ಯಾಯಾಲಯಲ್ಲಿ ಆರೋಪ ಸಾಬೀತಾದ ಕಾರಣ ನ್ಯಾಯಾಧೀಶರಾದ ಎಸ್.ಆರ್. ದಿಂಡಲ್ ಕೊಪ್ಪರವರು ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

ಕಲಂ ೩೬೩ ಐ.ಪಿ.ಸಿ.ಯಡಿಯಲ್ಲಿ ೫ ವರ್ಷಗಳ ಸಾದಾ ಜೈಲು ಶಿಕ್ಷೆ ೫ ಸಾವಿರ ದಂಡ, ದಂಡವನ್ನು ಪಾವತಿ ಮಾಡಲು ತಪ್ಪಿದ್ದಲ್ಲಿ ೬ ತಿಂಗಳ ಸಾದಾ ಜೈಲು ಶಿಕ್ಷೆ, ಕಲಂ ೩೭೬ ಐ.ಪಿ.ಸಿ.ಯಡಿಯಲ್ಲಿ ೧೦ ವರ್ಷ ಕಠಿಣ ಸಜೆ ಮತ್ತು ರೂ. ೨೦ ಸಾವಿರ ದಂಡ, ದಂಡವನ್ನು ಪಾವತಿ ಮಾಡಲು ತಪ್ಪಿದ್ದಲ್ಲಿ ೨ ವರ್ಷ ಸಾದಾ ಜೈಲು ಶಿಕ್ಷೆ, ಕಲಂ ೬ ಪೋಕ್ಸೋ ಕಾಯಿದೆಯಡಿ ೧೦ ವರ್ಷ ಕಠಿಣ ಸಜೆ ಮತ್ತು ೨೦ ಸಾವಿರ ದಂಡ, ದಂಡವನ್ನು ಪಾವತಿ ಮಾಡಲು ತಪ್ಪಿದ್ದಲ್ಲಿ ೧ ವರ್ಷ ಸಾದಾ ಜೈಲು ಶಿಕ್ಷೆ, ಕಲಂ ೩(೨)(ಗಿ) ಎಸ್.ಸಿ.ಎಸ್.ಟಿ ಕಾಯಿದೆಯಡಿಯಲ್ಲಿ ೧ ವರ್ಷ ಸಾದಾ ಸಜೆಗೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಯಾಸೀನ್ ಅಹಮದ್ ವಾದ ಮಂಡಿಸಿದರು.