ಮಡಿಕೇರಿ, ಸೆ. ೧೯ : ರಾಜ್ಯದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಗೊಂಡಿರುವ ಕೂಡಿಗೆಯ ಕ್ರೀಡಾವಸತಿ ಶಾಲೆ ಇನ್ನಷ್ಟು ಅಭಿವೃದ್ಧಿಗೊಳ್ಳಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ಈ ಬಗ್ಗೆ ಇಚ್ಚಾಶಕ್ತಿಯ ಕೊರತೆಯಿಂದಾಗಿ ಹೆಚ್ಚಿನ ಏಳಿಗೆ ಕಾಣದಂತಾಗಿದೆ. ಇರುವ ಪರಿಸ್ಥಿತಿಯಲ್ಲೇ ಈ ಕ್ರೀಡಾವಸತಿ ಶಾಲೆ ತೆವಳುತ್ತಾ ಸಾಗುತ್ತಿದೆಯಲ್ಲದೆ ಕ್ರೀಡೆಗೆ ಹಾಗೂ ಕ್ರೀಡಾ ವಿದ್ಯಾರ್ಥಿಗಳಿಗೆ ಇನ್ನಷ್ಟು ಸದವಕಾಶ ಒದಗಿಸುವಲ್ಲಿ ವಿಫಲತೆ ಕಾಣುತ್ತಿದೆ. ಈ ಹಿಂದೆ ಒಲಂಪಿಯನ್ ಪದ್ಮಶ್ರೀ ಪುರಸ್ಕೃತರಾಗಿರುವ ಡಾ. ಎಂ.ಪಿ. ಗಣೇಶ್ ಅವರ ದೂರದೃಷ್ಟಿತ್ವದ ಚಿಂತನೆಯೊAದಿಗೆ ಈ ಕ್ರೀಡಾ ಶಾಲೆ ಸರಕಾರದ ಮೂಲಕ ಕಾರ್ಯರೂಪಕ್ಕೆ ಬಂದಿದ್ದು ಸುದೀರ್ಘ ೩೨ ವರ್ಷಗಳೇ ಕಳೆದಿವೆ.
ಪ್ರಸ್ತುತ ಇಲ್ಲಿ ಟರ್ಫ್ ಮೈದಾನ, ಹಾಸ್ಟೆಲ್ ವ್ಯವಸ್ಥೆ, ಶಾಲೆ ಈ ರೀತಿಯ ಸೌಲಭ್ಯವಿದ್ದು, ಇದು ಸುಮಾರು ೨೨ ಎಕರೆ ಜಾಗವನ್ನು ಹೊಂದಿದೆ. ಕಳೆದ ಮೂರು ವರ್ಷಗಳ ಹಿಂದಿನ ತನಕ ಇಲ್ಲಿ ೮,೯ ಹಾಗೂ ೧೦ನೇ ತರಗತಿಗೆ ತಲಾ ೪೦ ವಿದ್ಯಾರ್ಥಿಗಳಂತೆ ಒಟ್ಟು ೧೨೦ ಮಕ್ಕಳಿಗೆ ವ್ಯವಸ್ಥೆ ಇತ್ತು. ಇದೀಗ ಕೆಲವರ್ಷದಿಂದ ಪಿಯುಸಿಯನ್ನು ಪ್ರಾರಂಭಿಸಲಾಗಿದ್ದು, ೧೫೦ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆದರೆ ಇದಿಷ್ಟರಲ್ಲೇ ಈ ಶಾಲೆ ನಿಂತ ನೀರಂತೆ ಕಾರ್ಯನಿರ್ವಹಿಸುತ್ತಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪದವಿ ತರಗತಿ - ಹಾಸ್ಟೆಲ್ ಪ್ರಾರಂಭಿಸಲು ಕೂಡ ಅವಕಾಶವಿದ್ದು, ಈ ಆವರಣದಲ್ಲಿ ಸೌಲಭ್ಯಗಳನ್ನು ಒದಗಿಸಬಹುದಾಗಿದೆ. ಆದರೆ ಯಾರೂ ಈ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಕಳೆದ ಸಾಲಿನಲ್ಲಿ ಇಲ್ಲಿ ಒಟ್ಟು ೧೮೬ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಈ ಸಂಖ್ಯೆಯನ್ನು ಮತ್ತೆ ೧೫೦ಕ್ಕೇ ನಿಗದಿಪಡಿಸುವಂತೆ ಮೇಲ್ಮಟ್ಟದಿಂದ ಆದೇಶ ಹೊರಬಿದ್ದಿದೆ.
ಕೊಡಗಿನ ವಿದ್ಯಾರ್ಥಿಗಳಿಗೆ ಅನ್ಯಾಯ...!
ಪ್ರಸಕ್ತ ಸಾಲಿನಲ್ಲಿ ಕ್ರೀಡಾಶಾಲೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಲ್ಲಿ ಕೊಡಗಿನ ಕ್ರೀಡಾ ಪ್ರತಿಭೆಗಳಿಗೆ ಅನ್ಯಾಯವಾಗಿರುವ ಕುರಿತು ಪೋಷಕರ ವಲಯದಿಂದ ಅಸಮಾಧಾನ ಕೇಳಿ ಬಂದಿದೆ. ೮ನೇ ತರಗತಿಗೆ ಹಾಕಿಯಲ್ಲಿ ೧೯ ರಿಂದ ೨೨ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತಾದರೂ ಈ ಕ್ರೀಡಾಶಾಲೆಗೆ ಕೇವಲ ಐದು ಬಾಲಕಿಯನ್ನು ಮಾತ್ರ ನೀಡಲಾಗಿದೆ. ಆಯ್ಕೆ ಮಾಡಲಾಗಿದ್ದ ಸುಮಾರು ೨೦ ಕ್ರೀಡಾಪಟುಗಳ ಪೈಕಿ ೯ ರಿಂದ ೧೦ ವಿದ್ಯಾರ್ಥಿಗಳು ಕೊಡಗಿ ನವರಾಗಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಕೂಡಿಗೆ ಕ್ರೀಡಾಶಾಲೆಯ ಬದಲಾಗಿ ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ ನೂತನವಾಗಿ ಪ್ರಾರಂಭಿಸ ಲಾಗುತ್ತಿರುವ ಕ್ರೀಡಾಶಾಲೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಇದು ಜಿಲ್ಲೆಯ ಕ್ರೀಡಾ ವಿದ್ಯಾರ್ಥಿಗಳ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಿಗೆ ಶಾಲೆಯಲ್ಲಿರುವ ವ್ಯವಸ್ಥೆಗಳು ಬಾಗಲಕೋಟೆಯಲ್ಲಿ ಇಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿದೆ. ಪೋಷಕರು ಇಲ್ಲಿರುವ ಸೌಲಭ್ಯ ಗಮನಿಸಿ ಈ ಬಗ್ಗೆ ಆಸಕ್ತಿ ತೋರು ತ್ತಾರೆ ಆದರೆ ದೂರದ ಪ್ರದೇಶಕ್ಕೆ ಇಲ್ಲಿನ ಮಕ್ಕಳನ್ನು ಕಳುಹಿಸುವದು ಎಷ್ಟು ಸರಿ ಎಂಬದು ಹಲವರ
ಪ್ರಶ್ನೆ.
(ಮೊದಲ ಪುಟದಿಂದ)
ಮುAದೊAದು ದಿನ ತಂಡವೇ ಇಲ್ಲವಾಗಬಹುದು
ಈ ಕ್ರೀಡಾಶಾಲೆಯಲ್ಲಿ ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಮುಗಿಸಿ ಹೊರ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ೮ನೇ ತರಗತಿಗೆ ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಆದರೆ ಈ ಬಾರಿ ಕೇವಲ ಐದು ವಿದ್ಯಾರ್ಥಿ ಗಳನ್ನು ಮಾತ್ರ ನೀಡಲಾಗಿದೆ. ಈ ವರ್ಷಕ್ಕೆ ೯-೧೦ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಹಾಕಿ ತಂಡ ರಚನೆಗೆ ಅವಕಾಶವಿದ್ದರೂ ಮುಂದಿನ ವರ್ಷಗಳಲ್ಲಿ ಇದು ಸಮಸ್ಯೆಯಾಗ ಬಹುದು ಎನ್ನಲಾಗುತ್ತಿದೆ. ಇದೀಗ ಈ ಕ್ರೀಡಾಶಾಲೆಯಲ್ಲಿ ಇರುವ ೧೫೦ ಸ್ಥಾನಗಳು ಭರ್ತಿಯಾಗಿವೆ. ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗದು ಈ ಬಗ್ಗೆ ಮೇಲ್ಮಟ್ಟದ ಇಲಾಖೆಯಿಂದಲೂ ಆದೇಶವಾಗಿ ರುವದರಿಂದ ಇಲ್ಲಿನ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ.
ವಿಶಾಲ ಆವರಣ ಹೊಂದಿರುವ ಈ ಶಾಲಾ ಆವರಣದಲ್ಲಿ ಪದವಿ ವಿಭಾಗವನ್ನೂ ತೆರೆಯಬಹುದಾಗಿದೆ. ಈ ಬಗ್ಗೆ ಇತ್ತೀಚೆಗೆ ಭೇಟಿ ನೀಡಿದ್ದ ಕ್ರೀಡಾ ಸಚಿವರು ಹೇಳಿಕೆ ನೀಡಿದ್ದರಾದರೂ ಇದು ಬಾಯಿ ಮಾತಲ್ಲೇ ಉಳಿದಿದೆ. ೨೨ ಎಕರೆ ಜಾಗದೊಂದಿಗೆ ಸನಿಹದಲ್ಲಿರುವ ಇನ್ನೂ ೧೦ ಎಕರೆ ಜಾಗವನ್ನು ಈ ಕ್ರೀಡಾಶಾಲೆಗೆ ಪಡೆದುಕೊಳ್ಳುವ ಅವಕಾಶವಿದ್ದರೂ ಯಾರೂ ಈ ಬಗ್ಗೆ ಗಂಭೀರ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಎನ್ನುವದು ವಿಷಾದಕರವಾಗಿದೆ.
ಈ ಶಾಲೆಗೆ ಸಂಬAಧಿಸಿದ ಪ್ರಮುಖರನ್ನು ಕೊಡಗಿನ ವಿದ್ಯಾರ್ಥಿ ಗಳಿಗೆ ಅವಕಾಶ ದೊರೆಯದಿರುವದು ಹಾಗೂ ಬಾಗಲಕೋಟೆ ಕಳುಹಿಸುತ್ತಿರುವ ಬಗ್ಗೆ ಪ್ರಶ್ನಿಸಿದರೆ ಮಡಿಕೇರಿ ಹಾಗೂ ಪೊನ್ನಂಪೇಟೆ ಯಲ್ಲಿರುವ ಶಾಲೆಯಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ಆದ್ಯತೆಯಿದೆ ಎನ್ನುತ್ತಾರೆ. ಆದರೆ ಈ ಎರಡು ಶಾಲೆಗಳು ಬರುವದು ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿ ಎಂಬದನ್ನು ಮರೆತಂತಿದೆ. ಕೂಡಿಗೆ ರಾಜ್ಯವ್ಯಾಪ್ತಿಯಲ್ಲಿರುವ ಕ್ರೀಡಾ ಶಾಲೆ ಎಂಬದು ಇಲ್ಲಿ ಉಲ್ಲೇಖನೀಯವಾಗಿದೆ.
ಪದವಿ ವಿದ್ಯಾರ್ಥಿಗಳ ಸೇರ್ಪಡೆಗೆ ಮನವಿ
ಪ್ರಸ್ತುತ ಕೂಡಿಗೆ ಕ್ರೀಡಾ ಶಾಲೆಯ ವಸತಿ ನಿಲಯದಲ್ಲಿ ದ್ವಿತೀಯ ಪಿ.ಯು.ಸಿ.ವರೆಗೂ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿಗೆ ಹೆಚ್ಚಿನ ಶಿಕ್ಷಣ ಮತ್ತು ವಸತಿ ನಿಲಯದ ಅವಶ್ಯಕತೆ ಇದ್ದು, ಈ ಬಗ್ಗೆ ಇತ್ತೀಚೆಗೆ ಭೇಟಿ ನೀಡಿದ್ದ ಕ್ರೀಡಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಪದವಿ ವಿಭಾಗದ ಕ್ರೀಡಾಪಟುಗಳ ಪ್ರವೇಶಕ್ಕೂ ಅವಕಾಶ ಒದಗಿಸಿಕೊಡಲು ಇತ್ತೀಚೆಗೆ ಶಾಲೆಯ ಮೂಲಕ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.