ಮಡಿಕೇರಿ, ಸೆ. ೨೦: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ವಿಶೇಷಚೇತನರಿಗೆ ವಿದ್ಯಾರ್ಥಿ ವೇತನ (೧೦ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ), ಸಾಧನ ಸಲಕರಣೆಗಳು (ಬಿಪಿಎಲ್ ಕುಟುಂಬದ ವಿಶೇಷಚೇತನರು), ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ (೨೦-೬೦ ವರ್ಷದೊಳಗಿನ ದೈಹಿಕ ವಿಶೇಷಚೇತನರು), ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ (೧೮-೪೫ ವರ್ಷದೊಳಗಿನ ಶ್ರವಣದೋಷವುಳ್ಳ ವಿಶೇಷಚೇತನರು), ಟಾಕಿಂಗ್ ಲ್ಯಾಪ್‌ಟಾಪ್ ಮತ್ತು ಬ್ರೆöÊಲ್ ಕಿಟ್ (೧೦ನೇ ತರಗತಿ ಮೇಲ್ಪಟ್ಟು ವ್ಯಾಸಂಗ ಮಾಡುತ್ತಿರುವ ದೃಷ್ಟಿದೋಷವುಳ್ಳ ವಿಶೇಷಚೇತನ ವಿದ್ಯಾರ್ಥಿಗಳಿಗೆ) ಯೊಜನೆಗಳ ಸೌಲಭ್ಯವನ್ನು ವಿಶೇಷಚೇತನರು ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ಕಚೇರಿಯಲ್ಲಿ ಅಥವಾ ತಾಲೂಕಿನ ವಿವಿಧೋದ್ದೇÃಶ ಪುನರ್ವಸತಿ ಕಾರ್ಯಕರ್ತರಿಂದ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ ೧೦ ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ದೂ.ಸಂ: ೦೮೨೭೨-೨೯೫೮೨೯ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ತಿಳಿಸಿದ್ದಾರೆ.