ಮಡಿಕೇರಿ, ಸೆ. ೨೦: ಕರ್ನಾಟಕ ಲೇಖಕಿಯರ ಬಳಗದ ಕೊಡಗು ಶಾಖೆಯನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಉದ್ಘಾಟಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶೋಭಾ ಸುಬ್ಬಯ್ಯ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದಾರೆ. ಮನೆ, ಮಕ್ಕಳು, ಕುಟುಂಬ ಅಲ್ಲದೇ ಸಮಾಜದಲ್ಲಿ ತನ್ನದೇ ಆದ ಚಾಪು ಮೂಡಿಸುತ್ತ ಮಾದರಿ ಕೆಲಸ ಮಾಡುತ್ತಿದ್ದಾರೆ. ಸ್ವಾವಲಂಬಿ ಬದುಕಿನ ಜೊತೆಗೆ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತಮ ಮಡಿಕೇರಿ, ಸೆ. ೨೦: ಕರ್ನಾಟಕ ಲೇಖಕಿಯರ ಬಳಗದ ಕೊಡಗು ಶಾಖೆಯನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಉದ್ಘಾಟಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶೋಭಾ ಸುಬ್ಬಯ್ಯ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದಾರೆ. ಮನೆ, ಮಕ್ಕಳು, ಕುಟುಂಬ ಅಲ್ಲದೇ ಸಮಾಜದಲ್ಲಿ ತನ್ನದೇ ಆದ ಚಾಪು ಮೂಡಿಸುತ್ತ ಮಾದರಿ ಕೆಲಸ ಮಾಡುತ್ತಿದ್ದಾರೆ. ಸ್ವಾವಲಂಬಿ ಬದುಕಿನ ಜೊತೆಗೆ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಉತ್ತಮ ಸೆಳೆಯುವ ಕಾರ್ಯಕ್ರಮ ರೂಪಿಸಬೇಕು. ಸೃಜನಶೀಲ ಬರಹಗಾರರನ್ನು ಗುರುತಿಸಬೇಕು ಎಂದ ಅವರು, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ. ೨೦ನೇ ಶತಮಾನದಿಂದ ಕನ್ನಡದಲ್ಲಿ ಸಾಹಿತ್ಯ ಪ್ರೇಮ ಹೆಚ್ಚಾಯಿತು. ಲೇಖಕರು ಹುಟ್ಟಿಕೊಂಡರು.
(ಮೊದಲ ಪುಟದಿಂದ) ಪ್ರಸ್ತುತ ಎಲ್ಲಾ ಆಯಾಮದಲ್ಲೂ ಸಾಹಿತ್ಯ ರೂಪುಗೊಂಡಿದೆ. ಪುರುಷ ಪ್ರಧಾನ ಸಮಾಜ, ಶಿಕ್ಷಣದಿಂದ ವಂಚಿತರಾಗಿದ್ದ ಹಿನ್ನೆಲೆ ಹಿಂದಿನ ಕಾಲದಲ್ಲಿ ಮಹಿಳಾ ಸಾಹಿತಿಗಳಿಗೆ ಕೊರತೆ ಇತ್ತು. ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷೆ ವಿಜಯ ವಿಷ್ಣುಭಟ್ ಮಾತನಾಡಿ, ಸಮಾಜಕ್ಕೆ ಸಂದೇಶ ನೀಡುವ ಸಾಹಿತಿಗಳು ಹಾಗೂ ಸಾಹಿತ್ಯಗಳು ಹುಟ್ಟಬೇಕು. ಸಾಹಿತ್ಯ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದ್ದು, ಸಂಘಟಿತರಾದರೆ ಪ್ರತಿಭೆಗಳಿಗೂ ವೇದಿಕೆ ಸಿಗಲಿದೆ ಎಂದರು.
ಲೇಖಕಿಯರ ಬಳಗದ ಅಧ್ಯಕ್ಷೆ ವನಮಾಲ ಸಂಪತ್ ಕುಮಾರ್ ಮಾತನಾಡಿ, ಪ್ರಕೃತಿಯನ್ನು ವರ್ಣಿಸಬೇಕಾದರೆ ಸಾಹಿತ್ಯಗಳಿಗೆ ಕೊಡಗು ಜಿಲ್ಲೆ ಕಣ್ಣ ಮುಂದೆ ಬರುತ್ತದೆ. ಕೊಡಗು ಜಿಲ್ಲೆಯಲ್ಲಿ ಸಂಘಟನೆಯ ಶಾಖೆ ಉದ್ಘಾಟನೆಯಾಗುತ್ತಿರುವುದು ಖುಷಿ ತಂದಿದೆ. ಮಹಿಳೆಯರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕೊರತೆ ಇದ್ದ ಹಿನ್ನೆಲೆ ೪೭ ವರ್ಷಗಳ ಹಿಂದೆ ಸಂಘವನ್ನು ಹುಟ್ಟು ಹಾಕಲಾಯಿತು. ಇಂದಿನ ತನಕ ಸಾಹಿತ್ಯ ಚಟುವಟಿಕೆ ಮಾಡುತ್ತ ಮಾದರಿ ಸಂಘಟನೆಯಾಗಿ ರೂಪುಗೊಂಡಿದೆ. ಕೊಡಗು ಜಿಲ್ಲೆಯಲ್ಲಿಯೂ ಕೂಡ ಸಾಹಿತ್ಯ ಸೇವೆ ಮುಂದುವರೆಸಲಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಜಲಾ ಕಾಳಪ್ಪ, ಫ್ಯಾನ್ಸಿ ಮುತ್ತಣ್ಣ, ಕಸ್ತೂರಿ ಗೋವಿಂದಮಯ್ಯ, ಸಂಘಟನೆಯ ಉಪಾಧ್ಯಕ್ಷರುಗಳಾದ ಆಶಾ ಹೆಗ್ಗಡೆ, ಗಿರಿಜಾ, ಕಾರ್ಯದರ್ಶಿ ನಾಗರತ್ನ, ಖಜಾಂಜಿ ರೇಣುಕಾ ದೇಸಾಯಿ ಸೇರಿದಂತೆ ಇನ್ನಿತರರು ಹಾಜರಿದ್ದರು. ತುಳಸಿ ಸುಬ್ರಮಣಿ ಸ್ವಾಗತಿಸಿ, ಉಷಾರಾಣಿ ನಿರೂಪಿಸಿ, ರಾಣಿ ರವೀಂದ್ರ ವಂದಿಸಿದರು.