ಗುಡ್ಡೆಹೊಸೂರು, ಸೆ. ೨೦: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಜಾನುವಾರುಗಳಿಂದ ವಾಹನ ಸವಾರರಿಗೆ ಭಾರೀ ತೊಂದರೆಯಾಗುತ್ತಿದ್ದು, ಪ್ರತಿನಿತ್ಯ ಇಲ್ಲಿನ ಆನೆಕಾಡಿನ ಬಳಿ ರಸ್ತೆ ಅಪÀಘಾತದಿಂದಾಗಿ ಅನೇಕ ಸಾವು ನೋವುಗಳು ಸಂಭವಿಸಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ನೂತನವಾಗಿ ಗೋಶಾಲೆ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ದನಗಳನ್ನು ಸಾಕಲು ಕಷ್ಟವಾದವರು, ಈ ಗೋಶಾಲೆಗೆ ಬಿಡುವಂತೆ. ಪಿಡಿಓ ಶ್ಯಾಂ ತಿಳಿಸಿದ್ದಾರೆ.

ಸೇವಾಭಾರತಿ ತಾಲೂಕು ಪ್ರಮುಖ ಬೊಟ್ಟುಮನೆ ರಮೇಶ್, ಮಂಡಲ ಕಾರ್ಯವಾರ್ ಮಹೇಂದ್ರ, ಮಂಡಲ ಸೇವಾ ಪ್ರಮುಖ ಸಂತೋಷ್ ಪಂಚಾಯಿತಿ ಅಧ್ಯಕ್ಷೆ ನಂದಿನಿ ದೇವರಾಜ್ ಹಾಗೂ ಪಿಡಿಓ ಅವರುಗಳಿಗೆ ಬೀಡಾಡಿ ದನಗಳ ಸಂಚಾರ ನಿಯಂತ್ರಿಸಲು ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ಪಿ.ಡಿ.ಓ. ಶ್ಯಾಂ ರಸ್ತೆಗಳಲ್ಲಿ ದನಗಳು ಕಂಡುಬAದಲ್ಲಿ ತಕ್ಷಣವೆ ಅವುಗಳನ್ನು ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಇರುವ ಗೋಶಾಲೆಗೆ ಬಿಡಲಾಗುವುದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.