ಪೊನ್ನಂಪೇಟೆ, ಸೆ. ೨೦: ಜೆಸಿಐ ಭಾರತದ ವಲಯ ೧೪ರ ವಲಯಾಡಳಿತ ಮಂಡಳಿ ಸದಸ್ಯರಾಗಿ ಕೊಡಗಿನ ಕೇಚಮಾಡ ಎಂ. ಶಿವ ನಾಚಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಗೊಳಿಸಲಾಗಿದೆ. ಇವರ ಆಯ್ಕೆಯನ್ನು ಜೇಸಿಸ್ ವಲಯ ೧೪ರ ಅಧ್ಯಕ್ಷರಾಗಿರುವ ಸೆನೆಟರ್ ಭರತ್ ಎನ್. ಆಚಾರ್ಯ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಶಿವ ನಾಚಪ್ಪ ಅವರು ಪ್ರಸಕ್ತ ಸಾಲಿನ ವಲಯಾಡಳಿತ ಮಂಡಳಿಯಲ್ಲಿ ಜೆಸಿಐ ಭಾರತದ ಅಧೀನದಲ್ಲಿ ಇತ್ತೀಚಿಗೆ ಜಾರಿಗೆ ಬಂದಿರುವ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್-ಎಸ್. ಎಂ. ಎ. (ಹಿರಿಯ ಸದಸ್ಯರ ಸಂಘ) ವಿಭಾಗವನ್ನು ಪ್ರತಿನಿಧಿಸಲಿದ್ದಾರೆ.

ಮೂಲತಃ ಹುದಿಕೇರಿ ಸಮೀಪದ ಹೈಸೊಡ್ಲೂರು ಗ್ರಾಮದವರಾದ ಕೆ. ಎಂ.ಶಿವ ನಾಚಪ್ಪ ಅವರು, ಈ ಹಿಂದೆ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಈ ಅವಧಿಯಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಎಂಬ ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು.