ವೀರಾಜಪೇಟೆ, ಸೆ. ೨೦: ಮೈಸೂರು ಸೆಂಟ್ ಫಿಲೋಮಿನ ಕಾಲೇಜಿನ ವಿದ್ಯಾರ್ಥಿನಿ ಕುಂಜಿಲಗೇರಿಯ ನಿವಾಸಿ ಕಾಮೆಯಂಡ ಮಾನಸ ಕೆ.ಎಸ್. ಅವರು ಎಂ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ.
ಕಾಕೋಟುಪರAಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳುಮಾಡು ಕುಂಜಿಲಗೇರಿ ಗ್ರಾಮದ ನಿವಾಸಿ ಕಾಮೆಯಂಡ ಸೋಮಯ್ಯ ಮತ್ತು ಶಾಂತಿ ದಂಪತಿಗಳ ಪುತ್ರಿಯಾದ ಮಾನಸ ಕೆ.ಎಸ್ ಅವರು ೨೦೨೦ನೇ ಸಾಲಿನ ಎಂ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಗಣಿತ ವಿಭಾಗದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ.