ಮಡಿಕೇರಿ, ಸೆ. ೧೮: ಪ್ರಸಕ್ತ ಸಾಲಿನಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‌ಫೇರ್ ವತಿಯಿಂದ ೬ ರಿಂದ ೧೮ ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಐಸಿಸಿಡಬ್ಲುö್ಯ ನ್ಯಾಷನಲ್ ಬ್ರೇವರಿ ಅವಾರ್ಡ್ಸ್ ಫಾರ್ ಚಿಲ್ಡçನ್ (೨೦೨೧) ಪ್ರಶಸ್ತಿ ಪ್ರದಾನ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

೨೦೨೧-೨೨ನೇ ಸಾಲಿನಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‌ಫೇರ್ ವತಿಯಿಂದ ೬ ರಿಂದ ೧೮ ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಪ್ರಕರಣವು ಜುಲೈ ೨೦೨೦ ರಿಂದ ೨೦೨೧ ರ ಸೆಪ್ಟೆಂಬರ್ ೩೦ ರೊಳಗೆ ನಡೆದಿರಬೇಕು. ೨೦೦೩ ರ ಆಗಸ್ಟ್ ೧ ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಪ್ರಶಸ್ತಿ ನೀಡಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು. ಅಥವಾ ಸಂಬAಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಪ್ರಕರಣ ನಡೆದಿರುವ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಎಫ್‌ಐಆರ್ ದಾಖಲಾಗಿರಬೇಕು. ಪ್ರಶಸ್ತಿಯು ಪದಕ (ಚಿನ್ನ, ಬೆಳ್ಳಿ ಪದಕ), ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಒಳಗೊಂಡಿರುತ್ತದೆ.

ಐಸಿಸಿಡಬ್ಲುö್ಯ ಭಾರತ್ ಅವಾರ್ಡ್ ರೂ. ೧ ಲಕ್ಷ, ಐಸಿಸಿಡಬ್ಲುö್ಯ ದ್ರುವ ಅವಾರ್ಡ್, ಐಸಿಸಿಡಬ್ಲುö್ಯ ಮಾರ್ಕಾಂಡೇಯ ಅವಾರ್ಡ್, ಐಸಿಸಿಡಬ್ಲುö್ಯ ಶ್ರವಣ ಅವಾರ್ಡ್, ಐಸಿಸಿಡಬ್ಲುö್ಯ ಪ್ರಹ್ಲಾದ್ ಅವಾರ್ಡ್, ಐಸಿಸಿಡಬ್ಲುö್ಯ ಏಕಲವ್ಯ ಅವಾರ್ಡ್, ಐಸಿಸಿಡಬ್ಲುö್ಯ ಅಭಿಮನ್ಯು ಅವಾರ್ಡ್ ತಲಾ ರೂ. ೭೫ ಸಾವಿರಗಳು ಮತ್ತು ಸಾಮಾನ್ಯ ಅವಾರ್ಡ್ ರೂ. ೪೦ ಸಾವಿರ ಆಗಿರುತ್ತದೆ.

೨೦೨೧-೨೨ನೇ ಸಾಲಿನ ಪ್ರಶಸ್ತಿಗೆ ನಿಗದಿಪಡಿಸಿರುವ ಇಂಗ್ಲೀಷ್ ಆವೃತ್ತಿಯ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಪಡೆದು ಅಥವಾ ವೆಬ್‌ಸೈಟ್: ತಿತಿತಿ.iಛಿಛಿತಿ.ಛಿo.iಟಿ ನಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‌ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ದೂ. ೦೮೨೭೨-೨೯೮೩೭೯ ಇವರಿಗೆ ಅಕ್ಟೋಬರ್ ೧೫ ರೊಳಗೆ ಸಲ್ಲಿಸಬೇಕು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.