ಗೋಣಿಕೊಪ್ಪ ವರದಿ, ಸೆ. ೧೮: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಆಶ್ರಯದಲ್ಲಿ ಕೌಶಲ್ಯಧಾರಿತ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪರಿಕರ ವಿತರಣಾ ಕಾರ್ಯಕ್ರಮ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆಯಿತು.
ಸಸ್ಯ ಕ್ಷೇತ್ರ ನಿರ್ವಹಣೆ, ಜೇನು ಕೃಷಿ, ಅರಣ್ಯ ಉತ್ಪನ್ನ ಹಾಗೂ ದೂರ ಸಂವೇದಿ ತಂತ್ರಜ್ಞಾನ ವಿಷಯದಲ್ಲಿ ಆಯ್ಕೆಯಾದ ೧೨೦ ಶಿಬಿರಾರ್ಥಿಗಳು ಪಡೆದುಕೊಂಡರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಶಬಾನಾ ಶೇಕ್ ಮಾತನಾಡಿ, ಸ್ವಯಂ ಸೇವಾ ಸಂಘದ ಮೂಲಕ ಅರ್ಥಿಕ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರೊ. ಡಾ. ಜಿ.ಎಂ. ದೇವಗಿರಿ ಮಾತನಾಡಿ, ಸ್ವ ಉದ್ಯೋಗಕ್ಕೆ ತರಬೇತಿ ಸಹಾಯವಾಗಲಿದೆ ಎಂದರು.
ಬೆAಗಳೂರು ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಜಂಟಿ ನಿರ್ದೇಶಕ ಡಾ. ದೀಪಜಾ, ಅರಣ್ಯ ಮಹಾ ವಿದ್ಯಾಲಯ ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ, ಸಸ್ಯ ಕ್ಷೇತ್ರ ನಿರ್ವಹಣೆ ಪ್ರಧಾನ ಸಂಶೋಧಕ ಡಾ. ರಾಮಕೃಷ್ಣ ಹೆಗಡೆ, ಜೇನು ಕೃಷಿ ತರಬೇತಿ ಪ್ರಧಾನ ಸಂಶೋಧಕ ಡಾ. ಆರ್.ಎನ್. ಕೆಂಚರೆಡ್ಡಿ, ಅರಣ್ಯ ಉತ್ಪನ್ನ ಪ್ರಧಾನ ಸಂಶೋಧಕ ಡಾ. ಸತೀಶ್ ಇದ್ದರು. ವಿದ್ಯಾ ಜಗದೀಶ್ ಪ್ರಾರ್ಥಿಸಿದರು.