ಮಡಿಕೇರಿ, ಸೆ. ೧೮: ಜಿಲ್ಲೆಯಲ್ಲಿ ವಿಶೇಷಚೇತರನ್ನು ಗುರುತಿಸುವ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ವಿಶೇಷಚೇತನರು ಸರಕಾರದ ಸೌಲಭ್ಯ ಪಡೆದುಕೊಳ್ಳಲು ದಾಖಲಾತಿಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ನಗರ ಪ್ರದೇಶದಲ್ಲಿರುವ ವಿಶೇಷಚೇತನರು ನಗರಸಭೆ, ನಗರ ಪುನರ್ವಸತಿ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶೇಷಚೇತನರ ಸಮೀಕ್ಷೆ ಮಾಡಲು ತಮ್ಮ ಬಳಿ ಬಂದಾಗ ಮಾಹಿತಿಯನ್ನು ಒದಗಿಸಿ ಹೆಸರನ್ನು ನಮೂದಿಸಿಕೊಳ್ಳಬೇಕೆಂದು ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ತಿಳಿಸಿದ್ದಾರೆ.
ವಿಶೇಷಚೇತನರ ಗುರುತಿನ ಚೀಟಿ ಹಾಗೂ ಗುರುತಿನ ಚೀಟಿ ಸಂಖ್ಯೆ, ವಾಸಸ್ಥಳ ಹಾಗೂ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಮಾಶಾಸನ ಆದೇಶದ ಪ್ರತಿ ಹಾಗೂ ಐಡಿ ಸಂಖ್ಯೆ ಜಾತಿ ಮತ್ತು ಆದಾಯದ ಪ್ರಮಾಣ ಪತ್ರದ ಸಂಖ್ಯೆ ಹಾಗೂ ಇನ್ನಿತರ ದಾಖಲೆಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗೆ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ರಾಜೇಶ್- ೮೦೭೩೧೯೨೯೧೪ ಮಡಿಕೇರಿ ತಾಲೂಕು, ಟಿ.ಆರ್. ಹರೀಶ್ ೯೦೦೮೬೮೫೧೨೯ ಸೋಮವಾರಪೇಟೆ ತಾಲೂಕು ಹಾಗೂ ಸಿ.ಬಿ. ಪ್ರಥನ್ ಕುಮಾರ್-೯೯೦೦೮೮೩೬೫೪ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ ೦೮೨೭೨-೨೯೫೮೨೯ ಸಂಪರ್ಕಿಸುವAತೆ ಅವರು ತಿಳಿಸಿದ್ದಾರೆ.