ಸೋಮವಾರಪೇಟೆ, ಸೆ. ೧೮: ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಯೋಜನೆಯಡಿ ವಿಶೇಷ ಕೈಪಿಡಿಗಳನ್ನು ವಿತರಿಸಲಾಯಿತು.
ಇಲ್ಲಿನ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಕೈಪಿಡಿ ವಿತರಿಸಿದರು.
ಈ ಸಂದರ್ಭ ಮಾತನಾಡಿದ ರೋಟರಿ ಅಧ್ಯಕ್ಷ ಪ್ರಕಾಶ್ಕುಮಾರ್ ಮಾತನಾಡಿ, ಕೊರೊನಾ ಲಾಕ್ಡೌನ್ ಹಿನ್ನೆಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತಗೊAಡಿತ್ತು. ಈ ಹಿನ್ನೆಲೆ ರೋಟರಿ ಮೂಲಕ ಶಿಕ್ಷಣ ತಜ್ಞರ ನೇತೃತ್ವದಲ್ಲಿ ವಿಶೇಷ ಕೈಪಿಡಿ ಸಿದ್ಧಪಡಿಸಲಾಗಿದ್ದು, ಇದು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾಗಿದೆ ಎಂದರು. ತಾಲೂಕಿನ ನೇರುಗಳಲೆ, ಕಿರಗಂದೂರು, ಐಗೂರು, ಮಾದಾಪುರ ಸೇರಿದಂತೆ ಇತರ ಸರ್ಕಾರಿ ಶಾಲೆಗಳ ೩೮೦ ವಿದ್ಯಾರ್ಥಿಗಳಿಗೆ ಕೈಪಿಡಿ ವಿತರಿಸಲಾಗುವುದು ಎಂದು ರೋಟರಿ ಮಾಜೀ ಅಧ್ಯಕ್ಷ ಪಿ.ಕೆ. ರವಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಧರ್ಮಪ್ಪ, ನಾಗೇಶ್, ಪ್ರಸ್ತುತ್, ಶಾಲಾ ಮುಖ್ಯ ಶಿಕ್ಷಕ ಬಸವರಾಜಪ್ಪ, ಶಿಕ್ಷಕ ಹನುಮಂತಪ್ಪ ತಳವಾರ್, ಶಿಕ್ಷಕಿ ಶಶಿಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.