ಮಡಿಕೇರಿ, ಸೆ. ೧೮: ಕರ್ನಾಟಕ ಲೇಖಕಿಯರ ಸಂಘದ ಕೊಡಗು ಜಿಲ್ಲಾ ಶಾಖೆ ಉದ್ಘಾಟನೆ ತಾ. ೨೦ ರಂದು (ನಾಳೆ) ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.

ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ರಾಜ್ಯಾಧ್ಯಕ್ಷೆ ವನಮಾಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ವಿಜಯ ವಿಷ್ಣುಭಟ್, ಕಸ್ತೂರಿ ಗೋವಿಂದಮಯ, ಫ್ಯಾನ್ಸಿ ಮುತ್ತಣ್ಣ, ಜಲಾ ಕಾಳಪ್ಪ, ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಭಾಗವಹಿಸಲಿದ್ದಾರೆ.