ಕುಶಾಲನಗರ, ಸೆ. ೧೯: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಮಡಿಕೇರಿ ಮಕ್ಕಂದೂರು ಬಳಿಯ ಕೂಲಿ ಕಾರ್ಮಿಕನೊಬ್ಬ ನಿಗೂಢವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮಡಿಕೇರಿ ಬಳಿಯ ಮಕ್ಕಂದೂರು ನಿವಾಸಿ ಸುಕುಮಾರ್ (೩೮) ಎಂಬಾತ ಮೃತಪಟ್ಟ ವ್ಯಕ್ತಿ. ಸುಕುಮಾರ್ ಕಳೆದ ಕೆಲವು ದಿನಗಳಿಂದ ಕೊಪ್ಪ ಗ್ರಾಮದ ಬಳಿ ಮರ ಕೆಲಸ ಮಾಡುತ್ತಿದ್ದು, ೪ ದಿನಗಳಿಂದ ಕಾಣೆಯಾಗಿರುವುದಾಗಿ ಆತನ ಜೊತೆಗಿದ್ದ ಸಂಬAಧಿಕರು ಠಾಣೆಯಲ್ಲಿ ದೂರು ನೀಡಿದ್ದರು. ಭಾನುವಾರ ಆತನ ಮೃತದೇಹ ಸುಟ್ಟು ಕರಕಲಾದ