ಮಡಿಕೇರಿ, ಸೆ. ೧೮: ಮಡಿಕೇರಿ ದಸರಾದ ದಶಮಂಟಪ ಸಮಿತಿ ಅಧ್ಯಕ್ಷ ಸ್ಥಾನವನ್ನು ನಿಕಟಪೂರ್ವ ಅಧ್ಯಕ್ಷ ಬಿ.ಗುರುರಾಜ್ (ಪುಟ್ಟ) ಕಂಚಿಕಾಮಾಕ್ಷಿ ದೇವಾಲಯ ಸಮಿತಿಯ ಉಮೇಶ್ ಸುಬ್ರಮಣಿ ಅವರಿಗೆ ಹಸ್ತಾಂತರಿಸಿದರು.

ಕಂಚಿ ಕಾಮಾಕ್ಷಿ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು. ಇದಕ್ಕೂ ಮುನ್ನ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಗುರುರಾಜ್, ಕಳೆದ ವರ್ಷ ಎಲ್ಲಾ ಮಂಟಪ ಸಮಿತಿಗಳು ಯಶಸ್ವಿ ಆಚರಣೆಗೆ ಪೂರಕ ಬೆಂಬಲ ನೀಡಿವೆ. ಮುಂದಿನ ಸಮಿತಿಗೂ ಎಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು.

ಸಮಿತಿಯ ಹಿರಿಯರಾದ ಡಿ.ಕೆ. ಮೋಹನ್, ರಾಜಣ್ಣ ಸೇರಿದಂತೆ ದಶಮಂಟಪಗಳ ಪ್ರಮುಖರು ಉಪಸ್ಥಿತರಿದ್ದರು. ಡಿ.ಪಿ. ನಾಗೇಶ್ ವರದಿ ವಾಚಿಸಿದರು, ಗಿರೀಶ್ ಸ್ವಾಗತಿಸಿ, ಗುರುರಾಜ್ ವಂದಿಸಿದರು.