*ಗೋಣಿಕೊಪ್ಪ, ಸೆ. ೧೮: ತೋಟ ಕಾರ್ಮಿಕರು ಖಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕೆಂದು ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯರು ಜಾಗೃತಿ ಮೂಡಿಸಿದರು.

ತಿತಿಮತಿ ವ್ಯಾಪ್ತಿಯ ರೇಷ್ಮೆ ಹಡ್ಲು ಹಾಡಿಯ ನಿವಾಸಿಗಳು ಸಾಂಪ್ರಾದಾಯ ಆಚರಣೆಗೆ ಕಟ್ಟು ಬಿದ್ದು, ಲಸಿಕೆ ಪಡೆದುಕೊಳ್ಳುವುದಿಲ್ಲ ಎಂದು ವಾದಿಸುತ್ತಿದ್ದರು. ಪಂಚಾಯಿತಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತೋಟ ಕೆಲಸಗಳಿಗೆ ತೆರಳದಂತೆ ಕಾರ್ಮಿಕರನ್ನು ತಡೆದು ಮನಪರಿವರ್ತಿಸಿ ಸ್ಥಳದಲ್ಲೇ ಲಸಿಕೆ ನೀಡಲು ಮುಂದಾದರು. ಲಸಿಕೆ ಪಡೆದುಕೊಳ್ಳದವರು ಯಾವುದೇ ಕಾರಣಕ್ಕೂ ಹೊರಭಾಗಗಳಿಗೆ ಕಾರ್ಮಿಕರಾಗಿ ತೆರಳಬಾರದೆಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪಂಚಾಯಿತಿ ಪೊಲೀಸರ ಮೂಲಕ ಮುಂದಾದ ಪರಿಣಾಮ ಹಾಡಿಯ ನಿವಾಸಿಗಳು ಲಸಿಕೆ ಪಡೆದುಕೊಂಡರು.

ಗ್ರಾ.ಪಂ. ಅಧ್ಯಕ್ಷ್ಷೆ ಆಶಾ, ಸದಸ್ಯ ಅನೂಪ್‌ಕುಮಾರ್, ಆಫ್ರೋಸ್, ಪಿ.ಡಿ.ಓ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.