*ಗೋಣಿಕೊಪ್ಪಲು, ಸೆ. ೧೯: ಹೆಸರು ಧ್ಯಾನ್ ಎನ್. ವಯಸ್ಸು ೬ ವರ್ಷ ೧೦ ತಿಂಗಳು. ೨ ವರ್ಷದಿಂದ ಈ ಪುಟ್ಟ ಪೋರ ಚದುರಂಗ (ಚೆಸ್)ದಲ್ಲಿ ತನ್ನ ವಯಸ್ಸನ್ನೂ ಮೀರಿ ಸಾಧನೆ ಮಾಡಿದ್ದಾನೆ. ತನ್ನದೇ ಆದ ಶೈಲಿಯಲ್ಲಿ ಆಟವಾಡಿ ರಾಜ್ಯ, ರಾಷ್ಟç ಮತ್ತು ಅಂತರಾಷ್ಟç ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ.

ಈತನ ತುಂಟತನ ನೋಡಿದರೆ ಬೆರಗಾಗುತ್ತದೆ. ಚದುರಂಗಕ್ಕೆ ತಾಳ್ಮೆ ಬಹಳ ಮುಖ್ಯ. ಆದರೆ ತುಂಟತನದಲ್ಲಿಯೂ ತನ್ನ ವಯಸ್ಸಿನ ಸ್ಪರ್ಧಿಗಳೊಂದಿಗೆ ವಿಶಿಷ್ಟ ಪ್ರತಿಭೆ ಮೆರೆದಿದ್ದಾನೆ. ಆಟವಾಡಲು ಕುಳಿತನೆಂದರೆ ಎದುರು ಸ್ಪರ್ಧಿಗಳ ಮುಖದಲ್ಲಿ ಬೆವರಿಳಿಸುತ್ತಾನೆ. ಅಂತಹ ಅಪ್ರತಿಮ ಪ್ರತಿಭೆ ಆತನದು.

ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಎಲ್ಲರ ಹುಬ್ಬೇರಿಸಿದ್ದ. ಬಳಿಕ ಮೈಸೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಸ್ಟ್ ಎಂಗೆಸ್ಟ್ ಪ್ರಶಸ್ತಿಗೆ ಭಾಜನವಾಗಿದ್ದ. ಕೇರಳದಲ್ಲಿ ನಡೆದಿದ್ದ ೭ ವರ್ಷದೊಳಗಿನ ಅಂತರಾಜ್ಯ ಮಟ್ಟದ ೭ ವರ್ಷದೊಳಗಿನ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದ. ತಮಿಳು ನಾಡಿನ ಮದುರೈ ಮತ್ತು ಕೊಯಮತ್ತೂರಿನಲ್ಲಿ ನಡೆದ ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಬಾಲ ಪ್ರತಿಭೆ ಪ್ರಶಸ್ತಿಗೂ ಭಾಜನವಾಗಿದ್ದ. ಆನ್‌ಲೈನ್‌ನಲ್ಲಿ ನಡೆದ ೧೦ ವರ್ಷದೊಳಗಿನ ಆಟಗಾರರ ಸ್ಪರ್ಧೆಯಲ್ಲಿ ಪ್ರಥಮ. ೭ ವರ್ಷದೊಳಗಿನ ಸ್ಪರ್ಧೆಯಲ್ಲಿ ಎರಡು ಬಾರಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದ.

ಕಾಪ್ಸ್ ವಿದ್ಯಾಸಂಸ್ಥೆಯಲ್ಲಿ ೨ನೇ ತರಗತಿ ವ್ಯಾಸಂಗ ಮಾಡುತ್ತಿರುವ ಧ್ಯಾನ್, ಅಲ್ಲಿನ ಗಣಿತಶಾಸ್ತç ಅಧ್ಯಾಪಕರಾಗಿರುವ ನಾಗೇಂದ್ರ ಪ್ರಸಾದ್ ಮತ್ತು ರಮ್ಯಶ್ರೀ ಅವರ ಪುತ್ರ. -ಎನ್.ಎನ್.ದಿನೇಶ್