ಸೋಮವಾರಪೇಟೆ, ಸೆ. ೧೮: ತಾಲೂಕಿನ ತಾಕೇರಿ ಗ್ರಾಮದಲ್ಲಿ ಪ್ರಸಕ್ತ ಸಾಲಿನಲ್ಲಿ ಉಂಟಾಗಿರುವ ಬೆಳೆ ನಷ್ಟ ಕುರಿತು ಕಾಫಿ ಬೆಳೆಗಾರರ ಹೋರಾಟ ಸಮಿತಿಯಿಂದ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಕಾಫಿ ಮಂಡಳಿಯ ಹಿರಿಯ ಸಂಪರ್ಕಾ ಧಿಕಾರಿ ಗೋಪಾಲ ನಾಯಕ್ ಮಾತನಾಡಿ, ಜಿಲ್ಲಾಧಿಕಾರಿಯವರ ಸೂಚನೆಯಂತೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಯವರ ಸಹಯೋಗದೊಂದಿಗೆ ಜಂಟಿ ಸರ್ವೆ ಮಾಡಿ ಫಸಲು ಹಾನಿಗೊಳಗಾದ ಜಾಗವನ್ನು ಮರು ಸಮೀಕ್ಷೆ ಮಾಡಲಾಗುವುದು ಎಂದರು.
ಕಾಫಿ ತೋಟದ ನಿರ್ವಹಣೆ ಕುರಿತು ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ಲಕ್ಷಿö್ಮಕಾಂತ್ ತಾಂತ್ರಿಕ ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ವಹಿಸಿದ್ದರು. ಕಾರ್ಯದರ್ಶಿ ಬಿ.ಎಸ್. ಸುದೀಪ್, ಗ್ರಾಮ ಪಂಚಾಯಿತಿ ಸದಸ್ಯ ಎಂ.ಪಿ. ತಿಮ್ಮಯ್ಯ, ಗ್ರಾಮಸ್ಥರಾದ ಎಂ.ಪಿ. ಅಪ್ಪಯ್ಯ, ಎಂ.ಪಿ. ಬಸಪ್ಪ ಮತ್ತಿತರರು ಇದ್ದರು.