ಸೋಮವಾರಪೇಟೆ, ಸೆ. ೧೮: ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ‘ಇಂಜಿನಿರ‍್ಸ್ ಡೇ’ ಪ್ರಯುಕ್ತ ೩೩ ವರ್ಷ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಇಇ ಕೆ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಅಮೃತ ಕಿರಣ್, ಪದಾಧಿಕಾರಿಗಳಾದ ಪ್ರೇಮಾ ಹೃಷಿಕೇಶ್, ಲತಾ ನಾಗೇಶ್, ತನ್ಮಯಿ ಪ್ರವೀಣ್ ಮತ್ತು ಭಾಗ್ಯ ಕೃಷ್ಣ ಇದ್ದರು.