ಮಡಿಕೇರಿ, ಸೆ. ೧೯: ಇಲ್ಲಿಗೆ ಸನಿಹದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಬಾಲಾಜಿ ತೋಟದ ನಡುವೆ ಸಾಗುವ ರಸ್ತೆಯಲ್ಲಿ ಕಾಡುಕೋಣ ವೊಂದು ಪ್ರತ್ಯಕ್ಷವಾಗಿದೆ. ಯಾವದೇ ದೊಡ್ಡದಾದ ಕಾಡು ಪ್ರಾಣಿಗಳಿಲ್ಲದಿದ್ದ ಈ ಊರಿನಲ್ಲಿ ಪ್ರಕೃತಿ ವಿಕೋಪದ ಬಳಿಕ ಈ ರೀತಿಯ ಪ್ರಾಣಿಗಳು ಕಂಡುಬರುತ್ತಿವೆ. ಈ ಹಿಂದೆ ಚಿರತೆಗಳ ಹೆಜ್ಜೆ ಕೂಡ ಕಂಡು ಬಂದಿತ್ತು. ಇಂದು ಸಂಜೆ ಎದುರಾದ ಈ ಅಪರೂಪದ ಅತಿಥಿ ಗ್ರಾಮದ ಯುವಕ ಕೊಡಿಯಡ್ಕ ಅಶೋಕನ ಕ್ಯಾಮರಾದಲ್ಲಿ ಸೆರೆಯಾಗಿದೆ.