ನಾಪೋಕ್ಲು, ಸೆ. ೧೮: ಕುಂಜಿಲ ಗ್ರಾಮದ ಪಯನರಿ ಜುಮಾ ಮಸೀದಿ ಹಾಗೂ ದರ್ಗಾದ ಮೂಲಕ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಡಾಮರೀಕರಣವನ್ನು ಕೈಗೊಳ್ಳದಿದ್ದಲ್ಲಿ ಮುಂಬರುವ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದಾಗಿ ಕುಂಜಿಲದ ಪಯನರಿ ಸುನ್ನಿ ಮುಸ್ಲಿಂ ಜಮಾಯತ್ನ ಅಧ್ಯಕ್ಷ ಮಕ್ಕಿ ಶೌಕತ್ ಆಲಿ ಎಚ್ಚರಿಸಿದ್ದಾರೆ. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೮ರಲ್ಲಿ ವೀರಾಜಪೇಟೆ ವಿಧಾನಸಭಾ ಶಾಸಕ ಕೆ.ಜಿ. ಬೋಪಯ್ಯ ಕುಂಜಿಲ -ಪಯನರಿ ರಸ್ತೆ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ್ದರು. ಆರು ತಿಂಗಳ ಬಳಿಕ ರಸ್ತೆ ಕಾಮಗಾರಿ ಆರಂಭಗೊAಡಿತು. ಬಳಿಕ ಸ್ಥಗಿತಗೊಂಡ ಕಾಮಗಾರಿ ಮುಂದುವರಿಯಲೇ ಇಲ್ಲ. ರಸ್ತೆ ಕಾಮಗಾರಿ ಆರಂಭಿಸುವAತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ರಸ್ತೆಗೆ ಜಲ್ಲಿ ತಂದು ಸುರಿದಿದ್ದಾರೆ. ಹಾಕಿದ ಜಲ್ಲಿ ಕಿತ್ತುಹೋಗಿದ್ದು, ನಡೆದಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರ ಪರವಾನಗಿಯನ್ನು ರದ್ದುಪಡಿಸಿ ಇತರ ಗುತ್ತಿಗೆದಾರರಿಂದ ಒಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸುವAತೆ ಅವರು ಒತ್ತಾಯಿಸಿದರು. ಕೂಡಲೇ ಈ ರಸ್ತೆ ಕಾಮಗಾರಿಯನ್ನು ಆರಂಭಿಸದಿದ್ದಲ್ಲಿ ಮುಂದಿನ ಜಿಲ್ಲಾ, ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟನೆ ಕೈಗೊಳ್ಳಲಾಗು ವುದು ಎಂದು ಎಚ್ಚರಿಸಿದರು.
ಜಮಾಯತ್ ಮಾಜಿ ಕಾರ್ಯದರ್ಶಿ ಅಜೀಜ್ ಮಾಸ್ಟರ್ ಮಾತನಾಡಿ, ಕುಂಜಿಲ ಪಯನರಿ ಸಂಪರ್ಕ ರಸ್ತೆ ಕಾಮಗಾರಿ ನೆರವೇರದೆ ಮೂರು ವರ್ಷಗಳಿಂದ ದುಸ್ಥಿತಿಗೆ ತಲುಪಿದೆ. ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಒಂದು ವಾರದ ಒಳಗಾಗಿ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಯನರಿ ಜಮಾಯತ್ ಉಪಾಧ್ಯಕ್ಷ ಕುಂಡAಡ ಇಬುಇಬ್ರಾಹಿಂ, ಕಕ್ಕಬ್ಬೆ - ಕುಂಜಿಲ ಗ್ರಾಮಪಂಚಾಯಿತಿ ಸದಸ್ಯರಾದ ಪೊಯ್ಯಕೆರೆ ಬಷೀರ್, ಕುಂಡAಡ ರಜಾಕ್ ಉಪಸ್ಥಿತರಿದ್ದರು. - ದುಗ್ಗಳ