ಚೆಟ್ಟಳ್ಳಿ, ಸೆ. ೧೯: ೭೫ನೇ ಸ್ವಾತಂತ್ರö್ಯತ್ಸೋವದ ಅಮೃತ ಮಹೋತ್ಸವದ ಪ್ರಯುಕ್ತ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಜೊತೆಗೆ ಈ ವರ್ಷವನ್ನು ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತಿರುವ ಹಿನ್ನೆಲೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಪೌಷ್ಠಿಕÀ ತೋಟಗಾರಿಕೆ ಮತ್ತು ಸಸಿನೆಡುವ ಕಾರ್ಯ ಕ್ರಮವನ್ನು ಆಯೋಜಿಸಲಾಯಿತು.

ಅತಿಥಿಗಳಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರಸಿನಾ, ಚೆಟ್ಟಳ್ಳಿ ಪ್ರೌಢಶಾಲೆಯ ಪ್ರಬಾರ ಮುಖ್ಯೋಪಾದ್ಯಾಯಿನಿ ತಿಲಕ.ಕೆ, ಕೇಂದ್ರೀಯ ತೋಟಗಾರಿಕಾ ಕೇಂದ್ರದ ಮೇಲ್ವಿಚಾರಕ ವಿಜ್ಞಾನಿ ಡಾ. ಚಂದ್ರಕಾAತ್ ಭಾಗವಹಿಸಿದ್ದರು. ಪ್ರಧಾನ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರವನ್ನು ಏರ್ಪಡಿಸಲಾಗಿತ್ತು.

ಸಿರಿಧಾನ್ಯ ಹಾಗೂ ಕಿರುಧಾನ್ಯಕ್ಕೆ ಅದರದ್ದೇ ಆದ ಮಹತ್ವವಿದ್ದು ಆರೋಗ್ಯ ವೃದ್ಧಿಸುವ ಶಕ್ತಿ ಹೊಂದಿದೆ. ಹಲವು ಬಗೆಯ ಸಿರಿಧಾನ್ಯಗಳನ್ನು ಬೆರೆಸಿ ಉತ್ತಮವಾದ ಪೌಷ್ಠಿಕಾಂಶದ ಆಹಾರನ್ನು ತಯಾರಿಸಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ನಾವು ಬೆಳೆಸುವುದರ ಮೂಲಕ ಆರೋಗ್ಯಕರ ಪೌಷ್ಠಿಕಾಂಶದ ಆಹಾರವನ್ನು ಪಡೆಯಲು ಸಾಧ್ಯವೆಂದು ಕೇಂದ್ರದ ವಿಜ್ಞಾನಿ ಡಾ. ರಾಣಿ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು, ಬೆಳೆಗಾರರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಚೆಟ್ಟಳ್ಳಿ ಪಂಚಾಯಿತಿ ಸದಸ್ಯ ಸಿ.ಈ. ತೀರ್ಥಕುಮಾರ್, ಬೆಳೆಗಾರ ಕೊಂಗೇಟಿರ ಲೋಕೇಶ್ ಅಚ್ಚಪ್ಪ, ಕೇಂದ್ರದ ತೋಟಗಾರಿಕಾ ಪ್ರದೇಶದಲ್ಲಿ ಹಲವು ಹಣ್ಣಿನ ಗಿಡಗಳನ್ನು ನೆಟ್ಟರು. ಭಾಗವಹಿಸಿದ ಎಲ್ಲರಿಗೂ ಕಿತ್ತಳೆ, ಬೆಣ್ಣೆಹಣ್ಣು, ರಾಮಫಲ, ಡ್ರಾಗನ್‌ಫ್ರೂಟ್, ಎಗ್ಗ್ಫ್ರೂಟ್, ಜಂಬೂ ನೇರಳೆ ಹಣ್ಣಿನ ಗಿಡಗಳನ್ನು ಕೇಂದ್ರದಿAದ ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.