ಪೆರಾಜೆ, ಸೆ. ೧೯: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಭಾರತೀಯ ಜನತಾ ಪಾರ್ಟಿ ಗ್ರಾಮ ಸಮಿತಿ ಪೆರಾಜೆ ಹಾಗೂ ಕೊಡಗು ಜಿಲ್ಲಾ ಕೃಷಿ ಮೋರ್ಚಾದ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನದ ಆವರಣದಲ್ಲಿ ಗೋಪೂಜೆ ಹಾಗೂ ನಿವೃತ ಯೋಧರಿಗೆ ಗೌರವಾರ್ಪಣೆ ಮಾಡುವುದರ ಮೂಲಕ ಆಚರಿಸಲಾಯಿತು.
ಕೊಡಗು ಜಿಲ್ಲಾ ಕೃಷಿ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ನಡೆಯುವ ಸೇವಾ ಸಮರ್ಪಣಾ ದಿವಸದ ಬಗ್ಗೆ ಹಾಗೂ ಮೋದಿ ಅವರ ಸಾಧನೆಯ ಬಗ್ಗೆ ಮಾತನಾಡಿದರು. ಈ ವೇಳೆ ಹತ್ತಾರು ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ಮೋರ್ಚಾ ಉಪಾಧ್ಯಕ್ಷ ಪೈಕೇರ ಮನು ಕುಮಾರ್, ಎಪಿಎಂಸಿ ಸದಸ್ಯರಾದ ಅನಂತ್ ಊರುಬೈಲು, ದೇವಪ್ಪ, ಗ್ರಾಮ ಪ್ರಮುಖ್ ನಂಜಪ್ಪ ನಿಡ್ಯಮಲೆ, ಸ್ಥಾನೀಯ ಸಮಿತಿಯ ಮೋರ್ಚಾ ಉಪಾಧ್ಯಕ್ಷ ಪೈಕೇರ ಮನು ಕುಮಾರ್, ಎಪಿಎಂಸಿ ಸದಸ್ಯರಾದ ಅನಂತ್ ಊರುಬೈಲು, ದೇವಪ್ಪ, ಗ್ರಾಮ ಪ್ರಮುಖ್ ನಂಜಪ್ಪ ನಿಡ್ಯಮಲೆ, ಸ್ಥಾನೀಯ ಸಮಿತಿಯ
ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.