ಸಿದ್ದಾಪುರ, ಸೆ. ೧೯ : ಎಸ್‌ವೈಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಧರ್ಮಗುರುಗಳಾದ ಕೆ.ಉಸ್ಮಾನ್ ಹಾಜಿಯವರ ಪ್ರಥಮ ವರ್ಷದ ಅನುಸ್ಮರಣೆ ಹಾಗೂ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕೊಡಗು ಜಿಲ್ಲಾ ಉಪಖಾಝಿ ಶೈಖುನಾ ಎಂ.ಎA ಅಬ್ದುಲ್ಲಾ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೆ.ಉಸ್ಮಾನ್ ಹಾಜಿಯವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ತನ್ನ ಜೀವನವನ್ನೇ ಬಡವರಿಗಾಗಿ, ಶೋಷಿತರಿಗಾಗಿ ಮುಡಿಪಾಗಿಟ್ಟ ಮಹಾನ್ ನಾಯಕರಾಗಿದ್ದರು. ಇವರ ಜೀವನ ಚರಿತ್ರೆ ಹಾಗೂ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿ ಕೊಳ್ಳ್ಳಬೇಕು ಎಂದರು.

ಪ್ರಖ್ಯಾತ ವಾಗ್ಮಿ ಮುಸ್ತಫ ಹುದವಿ ಆಕ್ಕೋಡ್ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿ, ಜೀವನವು ಸಾರ್ಥಕವಾಗಬೇಕಾದರೆ ಮಾನವೀಯತೆ, ಕರುಣೆಯು ಇರಬೇಕು. ಅಂತಹ ಎಲ್ಲಾ ಗುಣವನ್ನು ಹೊಂದಿದAತಹ ಅಮರ ನಾಯಕರಾಗಿದ್ದರು ಉಸ್ಮಾನ್ ಹಾಜಿ ಎಂದು ಸ್ಮರಿಸಿದರು.

ಎಸ್‌ವೈಎಸ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಸಮಸ್ತ ಸಂಯುಕ್ತ ಖಾಝಿ ಮುಹಮ್ಮದ್ ಜಮಲ್ಲುಲೈಲಿ ತಂಙಲ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಹಿರಿಯ ಮಹಾನ್ ನಾಯಕರುಗಳ ಜೀವನ ಚರಿತ್ರೆಯ ಪುಸ್ತಕಗಳನ್ನು ಹೆಚ್ಚು ಓದಬೇಕೆಂದರು.

೨೫ ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಸಮಸ್ತ ಸಂಘಟನೆಯ ಮೂಲಕ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗಗಳಲ್ಲಿ ಸೇವೆ ಸಲ್ಲಿಸಿ ಜಿಲ್ಲೆಯಿಂದ ನಿರ್ಗಮಿಸಿದ ಇಸ್ಮಾಯಿಲ್ ಉಸ್ತಾದ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಜಮಲ್ಲುಲೈಲಿ ತಂಙಲ್, ಎಂ.ಎA. ಅಬ್ದುಲ್ಲಾ ಫೈಝಿ ಹಾಗೂ ಮುಸ್ತಫಾ ಹುದವಿ ಅವರು ಸಮಾಜಕ್ಕೆ ನೀಡಿದ ಸೇವೆಗಳನ್ನು ಪರಿಗಣಿಸಿ ಎಸ್‌ವೈಎಸ್ ಜಿಲ್ಲಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಎಸ್‌ವೈಎಸ್ ಜಿಲ್ಲಾಧ್ಯಕ್ಷ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಸಿದ್ದಾಪುರ ಜುಮಾ ಮಸೀದಿ ಖತೀಬ್ ನೌಫಲ್ ಹುದವಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ರೆಹಮಾನ್ ಮುಸ್ಲಿಯಾರ್ , ಮಾಜಿ ಶಾಸಕರಾದ ಕೆ.ಎಂ ಇಬ್ರಾಹಿಂ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ. ಎ. ಯಾಕೂಬ್, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಸ್ತಫ ಹಾಜಿ, ಪ್ರಧಾನ ಕಾರ್ಯದರ್ಶಿ ರವೂಫ್ ಹಾಜಿ, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್, ಕಾರ್ಯದರ್ಶಿ ಲತೀಫ್ ಹಾಜಿ ಬೆಂಗಳೂರು, ಎಸ್ ವೈಎಸ್

ಜಿಲ್ಲಾ ಕೋಶಾಧಿಕಾರಿ ಉಮರ್ ಫೈಝಿ, ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಸೇರಿದಂತೆ ಮತ್ತಿತರರು ಹಾಜರಿದ್ದರು