ಕರಿಕೆ,ಸೆ. ೧೭: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯ ಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ಜಿಲ್ಲಾ ಪಂಚಾಯತಿ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ರ ಕುಂದು ಕೊರತೆ ಪರಿಹಾರಕ್ಕೆ ಸಂಬAಧಿಸಿದAತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ಸಾರ್ವಜನಿಕರು ಅರಣ್ಯ ಹಕ್ಕು, ವಿದ್ಯುತ್ ರಸ್ತೆ, ವಯಸ್ಕ ವೇತನ, ವಸತಿ, ರಸ್ತೆ, ವಿಧವಾ ವೇತನ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸಂಬAಧಿಸಿದAತೆ ತಮ್ಮ ಅಹವಾಲು ಗಳನ್ನು ಅಧ್ಯಕ್ಷರಿಗೆ ಸಲ್ಲಿಸಿದಾಗ ಕೂಡಲೇ ಸಂಬAಧಿಸಿದ ಅಧಿಕಾರಿ ಗಳಾದ ತಹಶೀಲ್ದಾರ್ ಮಹೇಶ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಸಮನ್ವಯ ಅಧಿಕಾರಿ ಶ್ರಿನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಮಂಜುನಾಥ್, ಕವಿತಾ, ವಿರೂಪಾಕ್ಷ, ತೋಟಗಾರಿಕೆ ಇಲಾಖೆಯ ಪ್ರಮೋದ್, ಭೂಮಾಪನ ಇಲಾಖೆಯ ವಿರೂಪಾಕ್ಷ ಅವರನ್ನು ಕಚೇರಿಗೆ ಕರೆಸಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಒಂದಷ್ಟು ಸಮಸ್ಯೆ ಗಳನ್ನು ಪರಿಹರಿಸಿದರು. ಈ ಸಂದರ್ಭ ಗರ್ವಾಲೆ, ಕರಿಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕರಿಕೆ ಅರಣ್ಯ ಹಕ್ಕು ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳ ಸಾರ್ವಜನಿಕರು ಹಾಜರಿದ್ದರು.