ಮಡಿಕೇರಿ, ಸೆ.೧೮ : ಗೋಣಿಕೊಪ್ಪಲು ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆಯು ತಾ. ೨೦ ರಂದು ಬೆಳಿಗ್ಗೆ ೧೧ ರಿಂದ ೧೨ ಗಂಟೆವರೆಗೆ ಗೋಣಿಕೊಪ್ಪಲು ಉಪವಿಭಾಗ ಕಚೇರಿ ಆವರಣದಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ವೀರಾಜಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯು ತಾ. ೨೦ ರಂದು ಮಧ್ಯಾಹ್ನ ೨.೩೦ ಯಿಂದ ೩.೩೦ ಗಂಟೆವರೆಗೆ ವೀರಾಜಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಗೋಣಿಕೊಪ್ಪಲು ಉಪ ವಿಭಾಗ (ಪೊನ್ನಂಪೇಟೆ ತಾಲೂಕು) ವ್ಯಾಪ್ತಿಯ ಮತ್ತು ವೀರಾಜಪೇಟೆ ಉಪ ವಿಭಾಗ (ವೀರಾಜಪೇಟೆ ತಾಲೂಕು) ವ್ಯಾಪ್ತಿಯ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ವಿದ್ಯುಚ್ಛಕ್ತಿಗೆ ಸಂಬAಧಿಸಿದ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಈ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಮಡಿಕೇರಿ ಸೆಸ್ಕ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಅವರು ತಿಳಿಸಿದ್ದಾರೆ.