ಮಡಿಕೇರಿ, ಸೆ. ೧೮: ಕೊಡಗು ಜಿಲ್ಲೆಯಲ್ಲಿ ಮಳೆ ಬಿಡುತ್ತಿಲ್ಲ., ಕೊರೊನಾ ಸಂಕಷ್ಟ ಪೂರ್ತಿಯಾಗಿ ನಿವಾರಣೆಯಾಗುತ್ತಿಲ್ಲ., ಸಂದಿಗ್ಧತೆಯ ನಡುವೆ ಶಾಲೆಗಳು ಆರಂಭಗೊಳ್ಳುತ್ತಿವೆ. ಮುಂದೇನು ಎಂಬದು ಅರಿವಾಗುತ್ತಿಲ್ಲ.

ಇಂತಹ ಸನ್ನಿವೇಶದ ನಡುವೆಯೇ ಈ ಬಾರಿ ದಸರಾ ಹಾಗೂ ತುಲಾ ಸಂಕ್ರಮಣ ಒಟ್ಟೊಟ್ಟಿಗೆ ಬರುತ್ತಿದೆ. ಈ ಎರಡು ಪ್ರಮುಖ ಆಚರಣೆಗಳಿಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಈ ತನಕ ಯಾವದೊಂದು ಬೆಳೆವಣಿಗೆಗಳು ಆರಂಭವಾದAತಿಲ್ಲ. ಇನ್ನೇನು ಕೇವಲ ತಿಂಗಳೊAದರ ಅವಧಿಯಷ್ಟೆ ಇದಕ್ಕೆ ಬಾರಿ ಉಳಿದಿದೆ. ಈ ನಿಟ್ಟಿನಲ್ಲಿ ಹತ್ತು ಹಲವಾರು ಸಿದ್ಧತೆಗಳು - ನಿರ್ಧಾರಗಳು ಜಿಲ್ಲೆಯಲ್ಲಿ ಅನಿವಾರ್ಯವಾಗಿ ಆಗಲೇಬೇಕಾಗಿದೆಯಾದರೂ ಜಿಲ್ಲಾಡಳಿತದಿಂದಾಗಲಿ, ಜನಪ್ರತಿನಿಧಿಗಳಿಂದಾಗಲಿ ಇದರ ಕುರಿತಾಗಿ ಯಾವದೇ ವಿಚಾರ ಈ ತನಕ ಹೊರಬಿದ್ದಿಲ್ಲ.

ಪ್ರಸಕ್ತ ವರ್ಷ ಅಕ್ಟೋಬರ್ ೧೪ ರಂದು ಆಯುಧ ಪೂಜೆ, ೧೫ ರಂದು ವಿಜಯದಶಮಿಯಾದರೆ, ಇದಾದ ಒಂದೇ ದಿನದ ಬಳಿಕ ತಾ. ೧೭ ರಂದು ತುಲಾ ಸಂಕ್ರಮಣದೊAದಿಗೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಘಟಿಸಲಿದೆ.

ಈ ಎರಡು ಪ್ರಮುಖ ಆಚರಣೆಗಳು ಒಟ್ಟೊಟ್ಟಿಗೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಈ ಬಾರಿ ನಿಭಾಯಿಸಲು ಸಾಕಷ್ಟು ಗಂಭೀರ ಪ್ರಯತ್ನ - ಚಿಂತನೆಗಳು ನಡೆಯಲೇಬೇಕಾಗಿದೆ. ಆದರೆ ಈ ತನಕ ಜಿಲ್ಲಾಡಳಿತವಾಗಲಿ ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಈ ಬಗ್ಗೆ ಒಂದೇ ಒಂದು ಸಭೆಯನ್ನು ಕೂಡ ಕರೆದಿಲ್ಲ. ಈಗಾಗಲೇ ಸೆಪ್ಟೆಂಬರ್ ೧೬ ಕಳೆದಿದ್ದು, ತಿಂಗಳಿಗೂ ಕಡಿಮೆ ಅವಧಿ ಮಾತ್ರ ಈ ಉತ್ಸವಗಳಿಗಿವೆ. ಈ ನಡುವೆ ಅಧಿವೇಶನವೂ ನಡೆಯುತ್ತಿದ್ದು, ಜನಪ್ರತಿನಿಧಿಗಳು ಬೆಂಗಳೂರಿನಲ್ಲಿದ್ದಾರೆ. ಕಳೆದ ವರ್ಷ ತಲಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಹತ್ತು ಹಲವಾರು ಗೊಂದಲಗಳು ಜಿಲ್ಲೆಯಲ್ಲಿ ಉಂಟಾಗಿದ್ದನ್ನೂ ಇಲ್ಲಿ ಸ್ಮರಿಸಬೇಕಾಗಿದೆ. ಕೊರೊನಾ ಕಾರಣದಿಂದಾಗಿ ಸಾಕಷ್ಟು ಬೆಳವಣಿಗೆಗಳು ಕಳೆದ ವರ್ಷ ನಡೆದು ಹೋಗಿದ್ದವು. ವಿಪರ್ಯಾಸವೆಂದರೆ ಈ ಬಾರಿಯೂ ಕೊರೊನಾ ಸಂಕಷ್ಟ ಪೂರ್ಣವಾಗಿ ನಿವಾರಣೆಯಾಗಿಲ್ಲ. ಜಿಲ್ಲೆಯಲ್ಲಿ ಪ್ರವಾಸಿಗಳ ಆಗಮನದ ವಿಚಾರದಲ್ಲೂ ಹಲವಾರು ಭಿನ್ನಾಭಿಪ್ರಾಯಗಳು ಪ್ರಸ್ತುತ ಇವೆ.

ದಸರಾ ಸಂದರ್ಭದಲ್ಲಿ ಇದು ಮತ್ತಷ್ಟು ಗೊಂದಲಗಳಿಗೆ ಎಡೆಯಾಗಬಹುದಾದ ಸಾಧ್ಯತೆಗಳೂ ಇವೆ. ದಸರಾ ಒಂದೆಡೆಯಾದರೆ ಜಿಲ್ಲೆಯ ಪ್ರಮುಖ ಆಚರಣೆ ಹಾಗೂ ಪದ್ಧತಿಯಾಗಿಯೂ ಇರುವ ತಲಕಾವೇರಿ ಜಾತ್ರೆಯೂ ಇನ್ನಷ್ಟು ಮಹತ್ವದ್ದಾಗಿದೆ. ಇದು ಜನತೆಯ ಧಾರ್ಮಿಕ ಆಚರಣೆಯ ಪ್ರಮುಖ ಭಾಗವೂ ಆಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹಂತ ಹಂತವಾಗಿ ಸಾಂಪ್ರದಾಯಿಕ ಆಚರಣೆಗಳಿಗೆ ಚಾಲನೆ ಸಿಗಲಿದೆ. ಆದರೆ ಈ ಬಾರಿ ಇದರ ಉಸ್ತುವಾರಿ ನಿರ್ವಹಣೆಗೆ ಸಮಿತಿಯೂ ಅಸ್ತಿತ್ವದಲ್ಲಿಲ್ಲ ಎಂಬದೂ ಗಮನಿಸಬೇಕಾದ ಅಂಶವಾಗಿದೆ. ಈ ವಿಚಾರಕ್ಕೆ ಸಂಬAಧಿಸಿದAತೆ ಸರಕಾರ - ಜಿಲ್ಲಾಡಳಿತದ ಮೂಲಕ ತ್ವರಿತಗತಿಯಲ್ಲಿ ಕೆಲಸ ಕಾರ್ಯಗಳು ಆಗಬೇಕಾಗಿದೆ.