ಮಡಿಕೇರಿ, ಸೆ. ೧೭: ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರ ಕಾರ್ಯಕ್ರಮ ತಾ. ೧೮ ರಂದು (ಇಂದು) ಸಂಜೆ ೪.೩೦ ಗಂಟೆಗೆ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ನಡೆಯಲಿದೆ.
ಕಳೆದ ಸಾಲಿನಲ್ಲಿ ದಶಮಂಟಪ ಸಮಿತಿ ಅಧ್ಯಕ್ಷರಾಗಿದ್ದ ಶ್ರೀ ಚೌಡೇಶ್ವರಿ ಬಾಲಕ ಮಿತ್ರ ಮಂಡಳಿಯ ಗುರುರಾಜ್ (ಪುಟ್ಟ) ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ಮುಂದಿನ ಸಾಲಿಗೆ ಪದ್ಧತಿಯಂತೆ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿಗೆ ಹಸ್ತಾಂತರಿಸಲಿರುವದಾಗಿ ತಿಳಿಸಿದ್ದಾರೆ. ಸಂಜೆ ನಡೆಯುವ ಸಭೆಯಲ್ಲಿ ಎಲ್ಲಾ ದಶಮಂಟಪಗಳು ಹಾಗೂ ನಾಲ್ಕು ಕರಗದೇವತೆಗಳ ಸಮಿತಿ ಪ್ರಮುಖರು ಪಾಲ್ಗೊಳ್ಳಲಿದ್ದು, ದಸರಾ ಆಚರಣೆ ಬಗ್ಗೆ ಚರ್ಚಿಸಲಾಗುವದೆಂದು ತಿಳಿಸಿದ್ದಾರೆ.