ಮಡಿಕೇರಿ, ಸೆ. ೧೭: ದೇಶದ ಪ್ರಧಾನಿ ನರೇಂದ್ರ ಮೋದಿಯವರ ೭೧ನೇ ಜನ್ಮದಿನವನ್ನು ಮಡಿಕೇರಿಯ ತ್ಯಾಗರಾಜ್ ಕಾಲೋನಿಯಲ್ಲಿರುವ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು. ಮಡಿಕೇರಿಯ ವಾರ್ಡ್ ನಂ. ೯ರ ಭಾಜಪಾ ಬೂತ್ ಅಧ್ಯಕ್ಷ ಭರತ್ ಎಸ್. ನೇತೃತ್ವದಲ್ಲಿ ವಾರ್ಡ್ನ ನಗರಸಭಾ ಸದಸ್ಯ ಕಲಾವತಿ, ವೃದ್ಧಾಶ್ರಮದ ಸತೀಶ್ ಅವರುಗಳು ಸೇರಿ ವೃದ್ಧಾಶ್ರಮದ ಹಿರಿಯರಿಂದ ಕೇಕ್ ಕತ್ತರಿಸಲಾಯಿತು. ಅಲ್ಲದೇ ಬೆಳಗ್ಗಿನ ಉಪಹಾರ ನೀಡಿ ೨ನೇ ಬಾರಿಗೆ ದೇಶದ ಪ್ರಧಾನಿಯಾಗಿ ಆಡಳಿತ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಮೆಲುಕು ಹಾಕಲಾಯಿತು. ಕಾರ್ಯಕ್ರಮದಲ್ಲಿ ವಾರ್ಡ್ನ ಬಿಜೆಪಿ ಕಾರ್ಯಕರ್ತರಾದ ಗೌರಮ್ಮ, ಪರಮೇಶ್, ಮುಕುಂದ, ಯತೀಶ್, ನಾಸಿರ್ ಉಪಸ್ಥಿತರಿದ್ದರು.