ಶನಿವಾರಸAತೆ, ಸೆ. ೧೮: ಶನಿವಾರಸಂತೆ ನಗರದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ಇತ್ತೀಚಿನ ದಿನಗಳಲ್ಲಿ ೫೦ ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಿದ್ದು, ಈ ಪೈಕಿ ಹೆಲ್ಮೆಟ್ ಧರಿಸದೆ ಹಾಗೂ ಸರಿಯಾದ ದಾಖಲಾತಿ ಇಲ್ಲದ ಒಟ್ಟು ೨೬ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಲಾಗಿದ್ದು, ರೂ. ೨೨ ಸಾವಿರ ಸಂಗ್ರಹವಾಗಿದೆ.

ಈ ಸಂದರ್ಭ ಠಾಣಾ ಎ.ಎಸ್.ಐ.ಗಳಾದ ಶಿವಲಿಂಗ, ಕೃಷ್ಣೇಗೌಡ, ಶಶಿಧರ್, ಸಿಬ್ಬಂದಿಗಳಾದ ಬೋಪಣ್ಣ, ಲೋಕೇಶ್, ಪ್ರದೀಪ್‌ಕುಮಾರ್, ಮುರುಳಿ, ಶಶಿಕುಮಾರ್, ರವಿಚಂದ್ರ, ಸೋಮಶೇಖರ್ ಇತರರು ಭಾಗಿಗಳಾಗಿದ್ದರು.