ಮಡಿಕೇರಿ, ಸೆ. ೧೮: ಕ್ರೀಡಾ ಸಂಸ್ಥೆ ಬೆಂಗಳೂರು ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಬೆಂಗಳೂರು ಇವರ ಅಧೀನದಲ್ಲಿ ನಡೆದ ಕ್ರೀಡಾಕೂಟದಲ್ಲಿ ೧೫ ವರ್ಷದ ಒಳಗಿನ ವಯೋಮಿತಿಯ ಕೊಡಗಿನ ಲಕ್ಷö್ಯ ಚೆಂಗಪ್ಪ ಸಿಂಗಲ್ಸ್ ಹಾಗೂ ಡಬಲ್ಸ್ನಲ್ಲಿ ಪ್ರಥಮ ಮತ್ತು ಮಿಕ್ಸೆಡ್ ಡಬಲ್ಸ್ನಲ್ಲಿ ಕೊಡಗಿನ ಬಿ. ದಿಯಾ ಭೀಮಯ್ಯ ಅವರೊಂದಿಗೆ ಜೊತೆಗೂಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಮೈಸೂರಿನ ಸ್ಪೋಟ್ಸ್ ಪಾರ್ಕ್ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಪಡೆಯುತ್ತಿದ್ದಾರೆ.