ಗೋಣಿಕೊಪ್ಪಲು, ಸೆ. ೧೭: ಕೊಡಗು ಬಿಟ್ಟು ಹೊರ ಹೋದ ಸಂದರ್ಭ ಅಲ್ಲಿನ ಜನರನ್ನು ಪರಿಚಯಿಸಿಕೊಂಡ ತಕ್ಷಣ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಕೊಡಗು ಎಂದಾಕ್ಷಣ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನೆನಪಾಗುವುದು ಸಹಜ. ಕೊಡಗಿನವರಾದ ನಮಗೆ ಅವರ ಹೆಸರು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯವೂ ಹೌದು. ಹಾಗೆ ನೋಡಿದರೆ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರ್ಯಪ್ಪರವರು ನಮ್ಮ ಸೇನೆಯ ಪ್ರಥಮ ದಂಡನಾಯಕರಾಗಿದ್ದವರು. ಅಷ್ಟೇ ಅಲ್ಲ ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದ ಮೊದಲಿಗರಾಗಿದ್ದಾರೆ. ಕೊಡಂದೇರ ಮಾದಪ್ಪರವರ ಪುತ್ರರಾಗಿ ೧೮೯೯ ಜನವರಿ ೨೮ ರಂದು ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಜನಿಸಿದ ಕಾರ್ಯಪ್ಪರವರು ಬಾಲ್ಯದಲ್ಲಿಯೇ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದರು.

ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಅದಮ್ಯ ಉತ್ಸಾಹ ಅವರಲ್ಲಿದ್ದುದರಿಂದ ೧೯೧೭ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಒದಗಿ ಬಂದಿತ್ತು. ೧೯೧೮ರಲ್ಲಿ ಮೊದಲನೆಯ ವಿಶ್ವ ಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ಬ್ರಿಟಿಷ್ ಆಡಳಿದ ಕಿಂಗ್ಸ್ ಕಮಿಷನ್‌ನಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಆ ಸಂದರ್ಭ ನಡೆದ ಕಠಿಣ ಪರೀಕ್ಷೆಗಳ ಬಳಿಕ ಆಯ್ಕೆಯಾದ ಬೆರಳೆಣಿಕೆಯ ಮಂದಿಯಲ್ಲಿ ಕಾರ್ಯಪ್ಪ ಒಬ್ಬರಾಗಿದ್ದರು,

ಅವರು ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂದೂರಿನಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು. ಮೆಸೊಪೊಟಾಮಿಯಾ (ಈಗಿನ ಇರಾಕ್)ದಲ್ಲಿದ್ದ ೩೭ (ವೇಲ್ಸ್ ರಾಜಕುಮಾರನ) ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು ೨ನೇ ರಾಜಪೂತ್ ಲಘು ಪದಾತಿದಳ(ವಿಕ್ಟೋರಿಯಾ ರಾಣಿಯ ಸ್ವಂತ)ಕ್ಕೆ ವರ್ಗಾಯಿಸಲಾಯಿತು. ೧೯೩೩ರಲ್ಲಿ ಕ್ವೆಟ್ಟಾದಲ್ಲಿದ್ದ ಸಾಫ್ಟ್ ಕಾಲೇಜಿನಲ್ಲಿ ತರಬೇತಿ ಪಡೆದ ಇವರು ಈ ತರಬೇತಿಯನ್ನು ಪಡೆದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ೧೯೪೬ರಲ್ಲಿ ಫ್ರಂಟೀಯರ್ ಬ್ರಿಗೆಡ್ ಗುಂಪಿನ ಬ್ರಿಗೇಡಿಯರಾಗಿ ಬಡ್ತಿ ಪಡೆದ ಇವರು ಕರ್ನಲ್ ಅಯೂಬ್ ಖಾನ್ (ಸ್ವಾತಂತ್ರö್ಯ ಬಳಿಕ ಪಾಕಿಸ್ತಾನದ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು ೧೯೬೨ ರಿಂದ ೧೯೬೯ ರವರೆಗೆ ರಾಷ್ಟçಪತಿಯಾಗಿದ್ದರು) ಇವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಕಾರ್ಯಪ್ಪನವರು ತಮ್ಮ ಸೇವಾವಧಿಯಲ್ಲಿ ವಿವಿಧ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ೧೯೪೧-೪೨ರ ವೇಳೆಯಲ್ಲಿ ಸಿರಿಯಾ ಮತ್ತು ಇರಾನ್ ದೇಶಗಳಲ್ಲಿಯೂ, ೧೯೪೩-೪೪ ರಲ್ಲಿ ಬರ್ಮಾದಲ್ಲಿ ಹಾಗೂ ವಝಿರಿಸ್ತಾನದಲ್ಲಿ ಕಾರ್ಯನಿರ್ವಹಿಸಿದರು. ೧೯೪೨ ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು. ಅವತ್ತಿನ ದಿನಕ್ಕೆ ಇಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಅವರಾಗಿದ್ದರು. ಅದಾದ ನಂತರ ಬರ್ಮಾದಿಂದ ಜಪಾನಿಯರನ್ನು ತೆರವುಗೊಳಿಸುವ ಸಲುವಾಗಿ ೨೬ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸಿದ ಅವರು ಅದನ್ನು ಯಶಸ್ವಿಗೊಳಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿಯನ್ನು ನೀಡಲಾಯಿತು.

ಯುವಜನತೆಗೆ ಸ್ಫೂರ್ತಿಯಾಗಬೇಕಿದ್ದ ಸ್ಮಾರಕ ನಿರ್ವಹಣೆ ಇಲ್ಲದೆ ಸೊರಗುವಂತಾಗಿದೆ. ದೇಶಕ್ಕೆ ಕೊಡುಗೆ ನೀಡಿದ ಈ ಮಹಾ ಸೇನಾನಿಗಳ ಪ್ರತಿಮೆಗಳನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯ ಕಾವೇರಿ ಕಾಲೇಜು ಮೈದಾನದ ಒಂದು ಬದಿಯಲ್ಲಿ ಈ ಪ್ರತಿಮೆಗಳು ನೆಲೆ ನಿಂತಿವೆ. ಆದರೆ ಇದನ್ನು ಹತ್ತಿರದಿಂದ ವೀಕ್ಷಿಸಲು ಜನತೆಗೆ ಸಾಧ್ಯವಾಗುತ್ತಿಲ್ಲ. ಹೊರ ಭಾಗದಲ್ಲಿ ಸದಾ ಕಾಲ ಗೇಟ್‌ಗೆ ಬೀಗ ಹಾಕಲಾಗುತ್ತಿದ್ದು ಇದರ ಒಳಗೆ ಆಗಮಿಸಲು ಅವಕಾಶವಿರುವುದಿಲ್ಲ. ಅಲ್ಲದೆ ಪ್ರತಿಮೆಯ ಸುತ್ತಮುತ್ತಲಿನಲ್ಲಿ ನಿರ್ವಹಣೆಯು ಇಲ್ಲದಂತಾಗಿದೆ. ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಹೂವಿನ ಮಾಲೆಗಳು ಅನೇಕ ದಿನಗಳ ತನಕ ಹಾಗೆಯೇ ಒಣಗಿ ನೇತಾಡುವ ಪರಿಸ್ಥಿತಿ ಕಂಡು ಬಂದಿದೆ. ಇದರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಫೋರಂನ ಪದಾಧಿಕಾರಿಗಳು ಅನೇಕ ಯೋಜನೆಗಳನ್ನು ಅಳವಡಿಸುವ ಭರವಸೆ ನೀಡಿದ್ದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ, ಸಿ.ಕೆ. ಬೋಪಣ್ಣ ಮಹಾನ್ ಸೇನಾನಿಗಳ ಪುತ್ಥಳಿ ಅನಾವರಣದಲ್ಲಿ ಜಿಲ್ಲಾ ಪಂಚಾಯಿತಿಯ ಅನುದಾನದಿಂದ ಮೂರು ಲಕ್ಷದ ವೆಚ್ಚದಲ್ಲಿ ಟೈಲ್ಸ್ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಕೆಲವು ಟೈಲ್ಸ್ಗಳು ಮೇಲೆದ್ದು ಬಂದಿವೆ. ಪ್ರತಿಮೆಯ ಆವರಣದಲ್ಲಿ ಉದ್ಯಾನವನದ ಬದಲಾಗಿ ಗಿಡಗಂಟಿ, ಹುಲ್ಲುಗಳು ಬೆಳೆದು ನಿಂತಿವೆ. ಈ ಪ್ರದೇಶದಲ್ಲಿ ವಿದ್ಯುತ್ ಬೆಳಕಿಲ್ಲದೆ ರಾತ್ರಿಯ ವೇಳೆಯಲ್ಲಿ ಬಿಕೋ ಎನ್ನುವ ವಾತಾವರಣ ಕಂಡುಬAದಿದೆ. ಭಾರತೀಯ ಸೈನ್ಯದಲ್ಲಿ ಶಿಸ್ತು ಹಾಗೂ ಸಮಯ ಪಾಲನೆಯನ್ನು ಜಾರಿಗೆ ತರುವ ಮೂಲಕ ಪ್ರಪಂಚದ ಅತ್ಯಂತ ಶಿಸ್ತುಬದ್ದ ಸೈನ್ಯ ಎಂಬ ಕೀರ್ತಿಯನ್ನು ತಂದುಕೊಟ್ಟ ಈ ಮಹಾನ್ ಚೇತನÀಗಳ ಪ್ರತಿಮೆಗಳು ನಿರ್ವಹಣೆ ಇಲ್ಲದೆ ಕಳೆಗುಂದುತ್ತಿರುವುದು ವಿಷಾದಕರ. ಯುವಜನತೆಗೆ ಸ್ಫೂರ್ತಿಯಾಗಬೇಕಾಗಿದ್ದ ಈ ದಿಗ್ಗಜರ ಸ್ಮಾರಕವೂ ಆದಷ್ಟು ಬೇಗ ನಿರ್ವಹಣೆಕಂಡು ದಿಗ್ಗಜರು ನಿಂತ ನೆಲ, ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಬೇಕಿದೆ.

ಫೋರಂ ಮಾಡಿರುವ ಈ ಪ್ರಯತ್ನ ಸಾಕಾರಗೊಳ್ಳಲು ಇತರರ ಸ್ಪಂದನವೂ ಆಗತ್ಯವಾಗಿದೆ.ಮೇ ೧೯೫೭ರಂದು ತಿಮ್ಮಯ್ಯನವರು ಭಾರತೀಯ ಭೂ ಸೈನ್ಯದ ೬ನೇ ಮುಖ್ಯಸ್ಥನಾಗಿ ಅಧಿಕಾರವನ್ನು ವಹಿಸಿಕೊಂಡರು. ೭ನೇ ಮೇ ೧೯೬೧ರಲ್ಲಿ ತಿಮ್ಮಯ್ಯನವರು ನಿವೃತ್ತರಾದರು. ೩೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ಮೇಜರ್-ಜನರಲ್ ತಿಮ್ಮಯ್ಯ ೧೯೫೭ ರಿಂದ ೧೯೬೧ ರವರೆಗೆ ಭಾರತದ ಭೂ ಸೇನೆಯದಂಡ ನಾಯಕರಾಗಿದ್ದರು. ಕೊರಿಯಾ ದೇಶದ ಯುದ್ಧ ನಂತರ ಸಂಯುಕ್ತ ರಾಷ್ಟçಗಳ ಒಂದು ದಳಕ್ಕೆ ಅಧಿಪತಿಯಾಗಿದ್ದು ಯುದ್ಧ ಖೈದಿಗಳ ಸ್ವದೇಶದಲ್ಲಿ ಪುನರ್ವಸತಿಯನ್ನು ಸ್ಥಾಪಿಸುವುದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟçಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ತರಾಗಿದ್ದರು. ಸೈಪ್ರಸ್‌ನಲ್ಲಿದ್ದ ಸಂದರ್ಭ ಹೃದಯ ಸ್ಥಂಭನದಿAದ ೧೯೬೫ರಲ್ಲಿ ನಿಧನರಾದರು. ಇದು ಕೊಡಗಿನ ಸೇನಾ ದಿಗ್ಗಜರ ಬದುಕಿನ ಇತಿಹಾಸವಾಗಿದೆ.

ಇಂತಹ ಮಹಾದಂಡನಾಯಕರ ಪ್ರತಿಮೆ ಒಂದೇ ಸ್ಥಳದಲ್ಲಿ ಸ್ಥಾಪಿಸಲು ಕಾರಣಕರ್ತರಾದ ಫೋರಂನ ಪದಾಧಿಕಾರಿಗಳ ಕಾರ್ಯಕ್ಕೆ ಜನಮೆಚ್ಚುಗೆ ಪಡೆದಿದ್ದು ಯುವ ಸಮುದಾಯಕ್ಕೆ ಸ್ಫೂರ್ತಿದಾಯಕವಾಗಿದೆ. ಗೋಣಿಕೊಪ್ಪದಲ್ಲಿ ಇವರಿಬ್ಬರ ಪ್ರತಿಮೆ ಒಟ್ಟಿಗೆ ಇರುವುದು ವಿಶೇಷವಾಗಿದೆ.

ಈ ಇಬ್ಬರು ಸೇನಾನಿಗಳ ಪ್ರತಿಮೆಗಳು ಒಂದೇ ಸ್ಥಳದಲ್ಲಿ ನೆಲೆ ನಿಂತಿರುವುದು ದಾಖಲೆ ಪುಟದಲ್ಲಿ ಅಚ್ಚಾಗಿದೆ. ೨೦೧೭ ನವೆಂಬರ್ ೫ ರಂದು ಈ ಮಹಾಸೇನಾನಿಗಳ ಕಂಚಿನ ಪ್ರತಿಮೆಯನ್ನು ಭಾರತೀಯ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್‌ರವರು ಸೇನಾ ಗೌರವದೊಂದಿಗೆ ಅನಾವರಣ ಮಾಡಿದ್ದರು.

ಇನ್ನಷ್ಟು ಕಾಯಕಲ್ಪ ಬೇಕಿದೆ

ರೂ. ೧೭ ಲಕ್ಷ ವೆಚ್ಚದಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಸಮೀಪದಲ್ಲಿ ಈ ಕಂಚಿನ ಪ್ರತಿಮೆಗಳು ನೆಲೆ ನಿಂತಿದೆ. ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಸುಬ್ಬಯ್ಯ ಹಾಗೂ ಪದಾಧಿಕಾರಿಗಳು ಈ ಪ್ರತಿಮೆಯನ್ನು ತವರು ನೆಲದಲ್ಲಿ ನೆಲೆ ನಿಲ್ಲಿಸಲು ಮೂಲ ಕಾರಣರು. ಇಂತಹ ಮಹಾನ್ ಸೇನಾನಿಗಳ ಪ್ರತಿಮೆಗಳು ಇದೀಗ ಸ್ವಲ್ಪಮಟ್ಟಿಗೆ ನಿರ್ವಹಣೆ ಕಾಣದಂತಾಗಿದೆ. - ಹೆಚ್.ಕೆ. ಜಗದೀಶ್