ಕಣಿವೆ, ಸೆ. ೧೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆನೆಕೆರೆಯ ಏರಿಯ ಮೇಲೆ ಮತ್ತೆ ಕೆಲವರು ತ್ಯಾಜ್ಯ ವಸ್ತುಗಳನ್ನು ಸುರಿಯುವ ಮೂಲಕ ಕೆರೆಯ ಸುಂದರ ಪರಿಸರವನ್ನು ಕಲ್ಮಶಗೊಳಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಹತ್ತಾರು ಸಾವಿರ ರೂಗಳನ್ನು ವ್ಯಯಿಸಿ ಆನೆ ಕೆರೆ ಏರಿಯನ್ನು ಸ್ವಚ್ಛಗೊಳಿಸಲಾಗಿತ್ತು. ಆದರೆ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷö್ಯದಿಂದಾಗಿ ಕೆರೆ ಏರಿ ಮತ್ತೆ ತ್ಯಾಜ್ಯಗಳ ಬೀಡಾಗುತ್ತಿದೆ. ಆದ್ದರಿಂದ ಕೂಡಲೇ ಪಂಚಾಯಿತಿ ವತಿಯಿಂದ ಆನೆಕೆರೆ ಏರಿಯ ಮೇಲೆ ಯಾವುದೇ ವ್ಯಕ್ತಿಗಳು ಕಸ ತ್ಯಾಜ್ಯ ಹಾಕದಂತೆ ಕ್ರಮ ಕೈಗೊಳ್ಳಬೇಕು. ಕೂಡಲೇ ಕೆರೆ ಏರಿಯ ಮೇಲೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಪಂಚಾಯಿತಿ ನಿಯಮಗಳನ್ನು ಉಲ್ಲಂಘಿಸಿ ಕಸ ಸುರಿಯುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಜರುಗಿಸಬೇಕೆಂದು ಚಿಕ್ಕತ್ತೂರಿನ ಉದಯಕುಮಾರ್, ಮಂಜು ಮತ್ತಿತರರು ಆಗ್ರಹಿಸಿದ್ದಾರೆ.