ಶ್ರೀಮಂಗಲ, ಸೆ. ೧೬: ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ಹಾಡಿ ನಿವಾಸಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ೧೦೦ ಕೋವಿಶೀಲ್ಡ್ ಲಸಿಕೆ ಹಾಕಲಾಯಿತು. ಹಲವಾರು ಬಾರಿ ಮನವೊಲಿಸಿದ ನಂತರ ಹಾಡಿಯ ನಿವಾಸಿಗಳು ಲಸಿಕೆ ಹಾಕಿಸಲು ಮುಂದೆ ಬಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಚಿನ್ ಪೆಮ್ಮಯ್ಯ ಚಿರಿಯಪಂಡ, ಪಿಡಿಒ ಕಾಳಪ್ಪ ಕಾಕೆರ, ನಾಗರಹೊಳೆ ಸದಸ್ಯ ಮನುಕುಮಾರ್, ಆರೋಗ್ಯ ಸೇವಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆ ರತಿ ಹಾಗೂ ಹಾಡಿ ನಿವಾಸಿಗಳು ಹಾಜರಿದ್ದರು.