ಕೂಡಿಗೆ, ಸೆ. ೧೬: ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯ ಸಭೆಯು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅಧ್ಯಕ್ಷತೆಯಲ್ಲಿ ಕೂಡ್ಲೂರು ಗ್ರಾಮದ ಕೈಗಾರಿಕಾ ಕೇಂದ್ರದಲ್ಲಿ ನಡೆಯಿತು.

ವೀರಾಜಪೇಟೆ ತಾಲೂಕು ಮಡಿಕೆಬೀಡು ಹೆಂಚಿನ ಕಾರ್ಖಾನೆ ನಿವೇಶನವನ್ನು ಜಿ.ಟಿ.ಟಿ.ಸಿ. ಕೇಂದ್ರ ಪ್ರಾರಂಭಿಸುವ ಸಂಸ್ಥೆಗೆ ಹಸ್ತಾಂತರಿ ಸುವ ಬಗ್ಗೆ ಚರ್ಚೆ, ಸೋಮವಾರಪೇಟೆ ತಾಲೂಕಿನಲ್ಲಿ ಹೊಸದಾಗಿ ಕೈಗಾರಿಕಾ ಪ್ರದೇಶ ಪ್ರಾರಂಭಿಸಲು ಯೋಗ್ಯ ಜಾಗ ಗುರುತಿಸುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಗುರುತಿಸುವಂತೆ ನಿರ್ದೇಶನ ನೀಡಿದರು.

ಮಡಿಕೇರಿ ಕೈಗಾರಿಕಾ ವಸಾಹತು ವಿನಲ್ಲಿ ಕೆ.ಎಸ್.ಎಸ್.ಐ.ಡಿ.ಸಿ. ವಾಣಿಜ್ಯ ಮಳಿಗೆ ವಿಲೇವಾರಿ ಬಗ್ಗೆ ಅಲ್ಲದೆ ಕುಶಾಲನಗರ ಕೈಗಾರಿಕಾ ಪ್ರದೇಶದ ೬೧.೭೦ ಎಕರೆ ಜಮೀನು ಈವರೆಗೂ ಕಂದಾಯ ಇಲಾಖೆಯಿಂದ ಕೆ.ಐ.ಎ.ಡಿ.ಬಿ. ಹೆಸರಿಗೆ ವರ್ಗಾವಣೆ ಆಗದೆ ಇರುವ ಬಗ್ಗೆ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಕೈಗಾರಿಕೆಗೆ ಸಂಬAಧಿಸಿದ ಅನೇಕ ಕಡತಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಂಕರನಾರಾಯಣ, ಜಿಲ್ಲಾ ನಿರ್ದೇಶಕ ರಘು, ಮೈಸೂರು ವಿಭಾಗದ ಕೆಎಸ್‌ಎಸ್‌ಐಡಿಸಿ ವಿಭಾಗದ ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಉದ್ದಿಮೆದಾರರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.