ಮಡಿಕೇರಿ, ಸೆ. ೧೬: ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಮೊಕದ್ದಮೆ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಬೇತು ಗ್ರಾಮದ ನಿವಾಸಿ ಪಿ.ಎ. ಬಷೀರ್ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರಿಗೆ ದೂರು ಸಲ್ಲಿಸಿದ್ದಾರೆ.

ತಾ. ೧೩ ರಂದು ವೈಯಕ್ತಿಕ ವಿಚಾರದ ಹಿನ್ನೆಲೆ ವಕೀಲರೊಬ್ಬರ ಮನೆಗೆ ತೆರಳಿ ತಾನು ಸೇರಿದಂತೆ ಅಣ್ಣನ ಮಗ ಅಲ್ತಾಫ್, ಅತ್ತಿಗೆ ತಾಹೆರ ಅವರು ಬರುತ್ತಿರುವಾಗ ಕಾರಿನಲ್ಲಿ ಬಂದ ಕೆ.ಎ. ಹ್ಯಾರಿಸ್, ಕುರೈಸಿ, ಅರೀಸ್, ಅಶ್ರಫ್, ಹುಸೇನ್, ಇರ್ಷಾದ್ ಮತ್ತು ಇನ್ನಿತರರು ನನ್ನ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿ, ಚಪ್ಪಲಿಯಿಂದ ಹೊಡೆದಿದ್ದಾರೆ. ಹಲ್ಲೆಯ ದೃಶ್ಯಾವಳಿಗಳು ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿವೆ.

ಈ ವೀಡಿಯೋವನ್ನು ನಾಪೋಕ್ಲು ಪೊಲೀಸರಿಗೆ ತೋರಿಸಿ ದೂರು ಸಲ್ಲಿಸಿದರು ಪ್ರಕರಣ ದಾಖಲಿಸುತ್ತಿಲ್ಲ ಎಂದು ಆರೋಪಿಸಿರುವ ಅವರು, ನನ್ನ ಮೇಲೆ ಹಲವು ಬಾರಿ ಹ್ಯಾರಿಸ್ ಕೊಲೆ ಯತ್ನ ಮಾಡಿದ್ದು, ಸೂಕ್ತ ರಕ್ಷಣೆ ನೀಡುವಂತೆ ಹಾಗೂ ಆರೋಪಿಗಳ ಮೇಲೆ ಸೂಕ್ತ ಕ್ರಮವಹಿಸುವಂತೆ ಲಿಖಿತ ದೂರಿನ ಮೂಲಕ ಮನವಿ ಮಾಡಿದ್ದಾರೆ.